
ಚಿಕ್ಕಮಗಳೂರು ನಗರದ ಸುತ್ತ ಮುತ್ತ ಒಂಟಿ ಸಲಗ ಎಂಟ್ರಿ ಕೊಟ್ಟಿದೆ. ಈ ವೇಳೆ ಗ್ರಾಮದ ಜಾನುವಾರುಗಳ ಮೇಲೆ ಕಾಡಾನೆ ದಾಳಿ ನಡೆಸಿದೆ.
ಇಂದು ಬೆಳಿಗ್ಗೆ ತೇಗೂರು, ಮೂರು ಮನೆ ಹಳ್ಳಿ ಗ್ರಾಮಗಳಲ್ಲಿ ಬೃಹತ್ ಗಾತ್ರದ ಆನೆಯೊಂದು ಬಂದು ಧಾಂದಲೆ ನಡೆಸಿತ್ತು . ಆ ಆನೆಯ ಪುಂಡಾಟ ಕಂಡು ಗ್ರಾಮದ ಜನರು ಕೆಲಕಾಲ ಭಯಬೀತರಾಗಿದ್ದಾರೆ. ಆ ಸಮಯದಲ್ಲಿ ಆನೆ ಗ್ರಾಮದ ಜಾನುವಾರ ಮತ್ತು ನಾಯಿಗಳ ಮೇಲೆ ದಾಳಿ ನಡೆಸಿದೆ. ಈ ವೇಳೆ ಅಲ್ಲಿದ್ದ ಜನ ಕಿರುಚಾಡಿದ ಪರಿಣಾಮ ಒಟಿ ಸಲಗ ಗಾಬರಿಯಿಂದ ಓಡಿಹೋಗಿದೆ
Poll (Public Option)

Post a comment
Log in to write reviews