ಬೆಂಗಳೂರು: ನಿನ್ನೆ ಭಾರೀ ಮಳೆಯಾಗಿದ್ದು, ಭಾನುವಾರ ತಡರಾತ್ರಿಯಿಂದ ಮುಂಜಾವಿನ ವರೆಗೂ ಸುರಿದ ಧಾರಾಕಾರ ಮಳೆಯಿಂದ ಸೋಮವಾರ ಬೆಳಗ್ಗೆ ಶಾಲಾ-ಕಾಲೇಜು ಹಾಗೂ ಆಫೀಸ್‌ಗೆ ಹೋಗಬೇಕಾದವರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಅದರಲ್ಲೂ ಎಲೆಕ್ಟ್ರಾನಿಕ್ ಸಿಟಿಯಿಂದ ಸೆಂಟ್ ಜಾನ್ಸ್ ತನಕ ಸಂಪೂರ್ಣ ಟ್ರಾಫಿಕ್ ಜಾಮ್ ಆಗಿದ್ದು, ಒಂಡೆದೆ ವಾಹನ ಸವಾರರು ಪರದಾಡಿದರೆ, ಮತ್ತೊಂದೆಡೆ ಒಂದಷ್ಟು ಜನರು ಬಸ್‌ನಲ್ಲಿ ಸಿಲುಕಿಕೊಂಡು ಕಿರಿಕಿರಿ ಅನುಭವಿಸಿದ್ದಾರೆ. ಸಿಲ್ಕ್ ಬೋರ್ಡ್ನಲ್ಲಿ ಬಳಿ ಕಾರೊಂದು ನೀರಲ್ಲಿ ಮುಳುಗಿದೆ ಪರಿಣಾಮ ಬೆಳ್ಳಂಬೆಳಗ್ಗೆಯೇ ಈ ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಆಗಿದೆ. ಸಾಮಾನ್ಯವಾಗಿ ಸಿಲ್ಕ್ ಬೋರ್ಡ್ ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಇರುತ್ತದೆ.
ಆದರೆ ಇಂದು ಆಗಸ್ಟ್ 12 ಸೋಮವಾರ ಬೆಳಗ್ಗೆ ಜನ ಹಿಂದೆದೂ ಕಾಣದ ಟ್ರಾಫಿಕ್ ಜಾಮ್ ಆಗಿ 2-3 ತಾಸುಗಳ ಕಾಲ ಬಸ್‌ನಲ್ಲೇ ನಿಲ್ಲುವ ಪರಿಸ್ಥಿತಿ ಕಾಣುವಂತಾಗಿದೆ. ಸುಮಾರು ಎರಡು ಮೂರು ಗಂಟೆಗಳ ಕಾಲ ಅವಧಿಯಲ್ಲಿ ಬಸ್‌ಗಳು ಕೇವಲ ಎರಡು ಮೂರು ನಿಲ್ದಾಣಗಳನ್ನಷ್ಟೇ ತಲುಪುವಂತಾಗಿತ್ತು. ಟ್ರಾಫಿಕ್ ಜಾಮ್‌ನಿಂದ ಬಸ್‌ಗಳು ಮುಂದೆ ಚಲಿಸದ ಕಾರಣ, ಪ್ರಯಾಣಿಕರು ಗಂಟೆ ಗಟ್ಟಲೇ ಬಸ್ ನಿಲ್ದಾಣದಲ್ಲಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ಕಚೇರಿಗೆ ತೆರಳುವವರು ಸರಿಯಾದ ಸಮಯಕ್ಕೆ ಬಸ್ ಬಾರದೇ ಬಸ್ ನಿಲ್ದಾಣದಲ್ಲಿಯೇ ಇರುವಂತಾಗಿದೆ. ಇನ್ನು ಕೆಲವು ಬಸ್‌ಗಳು ಪ್ರಯಾಣಿಕರಿಂದ ತುಂಬಿದ್ದು, ಯಾರನ್ನು ಕೂಡ ಮತ್ತೆ ಹತ್ತಿಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಇದಿಷ್ಟು ಬಸ್ ನಿಲ್ದಾಣಗಳಲ್ಲಿ ಕಾಯುತ್ತಿರುವ ಜನರ ಸ್ಥಿತಿಯಾದರೆ, ಬಸ್‌ನ ಒಳಗೆ ಸಿಲುಕಿಕೊಂಡ ಪ್ರಯಾಣಿಕರ ಸ್ಥಿತಿ ಅಧೋಗತಿ ಎನ್ನುವಂತಾಗಿತ್ತು.
Post a comment
Log in to write reviews