ಹೈದರಾಬಾದ್: ತಿರುಮಲ ತಿರುಪತಿ ದೇವಸ್ಥಾನದಲ್ಲಿ ಪ್ರಾಣಿಗಳ ಕೊಬ್ಬಿನಿಂದ ತಯಾರಿಸಿದ ಲಡ್ಡು ವಿತರಿಸಿದ್ದಕ್ಕೆ ಪ್ರಾಯಶ್ಚಿತ ಮಾಡಿಕೊಳ್ಳುವ ಸಲುವಾಗಿ ಜನಸೇನಾ ಪಕ್ಷದ ಅಧ್ಯಕ್ಷ, ಆಂಧ್ರಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ 11 ದಿನಗಳಕಾಲ ಉಪವಾಸ ವ್ರತ ಆರಂಭಿಸಿದ್ದಾರೆ
ಗುಂಟೂರು ಜಿಲ್ಲೆಯ ನಂಬೂರಿನ ಶ್ರಿ ದಶಾವತಾರ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಬೆಳಗ್ಗೆ 11 ದಿನಗಳ ಕಾಲ ಉಪವಾಸ ಆರಂಭಿಸಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅವರು, ‘ಹಿಂದಿನ ಆಡಳಿತಗಾರರಿಂದಾಗಿ ತಿರುಮಲದ ಲಡ್ಡು ಪ್ರಸಾದ ಅಪವಿತ್ರವಾಗಿದೆ. ಈ ಪಾಪವನ್ನು ಗುರುತಿಸುವಲ್ಲಿ ವಿಫಲವಾಗಿದ್ದೇವೆ ಹಿಂದೂ ಜನಾಂಗಕ್ಕೇ ಇದು ಕಳಂಕ ತಂದಿದೆ. ಲಡ್ಡುವಿನಲ್ಲಿ ಪ್ರಾಣಿ ಕೊಬ್ಬು ಬಳಕೆಯಾಗಿರುವುದು ತಿಳಿದು ಆಘಾತವಾಯಿತು. ಜನರ ಕಲ್ಯಾಣಕ್ಕಾಗಿ ಶ್ರಮಿಸುವ ನನಗೆ ಇದು ಮೊದಲೇ ತಿಳಿಯಲಿಲ್ಲ ಎಂದು ಬೇಸರವಾಗುತ್ತಿದೆ. ತಿಮ್ಮಪ್ಪನಿಗೆ ಮಾಡಿದ ಈ ಅನ್ಯಾಯಕ್ಕೆ ಸನಾತನ ಧರ್ಮದಲ್ಲಿ ನಂಬಿಕೆ ಉಳ್ಳವರೆಲ್ಲ ಪ್ರಾಯಶ್ಚಿತ ಮಾಡಿಕೊಳ್ಳಬೇಕು. ನಾನೂ ಕೂಡ 11 ದಿನ ಉಪವಾಸ ಮಾಡಿ, ದೀಕ್ಷೆಯ ಕೊನೆಯ 2 ದಿನ ಆಗಸ್ಟ್ 1 ಮತ್ತು 2 ರಂದು ತಿರುಪತಿಗೆ ತೆರಳುವೆ. ದೇವರ ದರ್ಶನ ಪಡೆದು ಕ್ಷಮೆ ಯಾಚಿಸಿ ಪ್ರಾಯಶ್ಚಿತ ದೀಕ್ಷೆ ಪೂರ್ಣಗೊಳಿಸುವೆ ಎಂದಿದ್ದಾರೆ.
Post a comment
Log in to write reviews