
ಬೆಂಗಳೂರು: ದರ್ಶನ್ ಮತ್ತು ಗ್ಯಾಂಗ್ ಕರಾಳಕೃತ್ಯ ನಡೆಸಿದ ಪಟ್ಟಣಗೆರೆ ಶೆಡ್ ಈಗ ಫೇಸ್‌ಬುಕ್‌ನಲ್ಲೂ ಪ್ರತ್ಯಕ್ಷವಾಗಿದೆ. ಅಚ್ಚರಿಯ ಅಂಶ ಏನೆಂದರೆ ಇದಕ್ಕೂ ಸಾವಿರಾರು ಅಭಿಮಾನಿಗಳು ಹಾಗೂ ಜನರು ಈ ಗ್ರೂಪ್ ಸೇರಿಕೊಂಡಿರುವುದು.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಅಲ್ಲದೆ ಈ ಶೆಡ್‌ನಲ್ಲಿಯೇ ಆತನ ಕೊಲೆ ನಡೆದಿತ್ತು. ಇದರಲ್ಲಿ ಭಾಗಿಯಾದ ನಟ ದರ್ಶನ್ ಸೇರಿದಂತೆ ಬಹುತೇಕ ಆರೋಪಿಗಳು ಈಗ ಕಂಬಿಯ ಹಿಂದಿದ್ದಾರೆ. ಇದೇ ವೇಳೆಯಲ್ಲಿ ನಟನ ಕೃತ್ಯವನ್ನು ವಹಿಸಿಕೊಂಡು ಆತನ ಅಭಿಮಾನಿಗಳೂ ಕೂಡ ತಮ್ಮದೇ ಆದ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಇದೇ ವೇಳೆ ರೇಣುಕಾ ಸ್ವಾಮಿ ಕೊಲೆಯಾದ ಸ್ಥಳ ಪಟ್ಟಗೆರೆ ಶೆಡ್ ಈಗ ಚಾಲ್ತಿಯಲ್ಲಿದೆ. ಈ ರೀತಿಯ ಅಕೌಂಟ್ ಒಂದು ಫೇಸ್‌ಬುಕ್ ನಲ್ಲಿ ಕ್ರಿಯೇಟ್ ಆಗಿದ್ದು, ಎಲ್ಲೆಡೆ ವೈರಲ್ ಆಗಿದೆ. ಈ ಅಕೌಂಟ್ ನಿಂದ ಹಲವು ಫೇಸ್‌ಬುಕ್ ಬಳಕೆದಾರರಿಗೆ ಫ್ರೆಂಡ್ ರಿಕ್ವೆಸ್ಟ್ ಸೆಂಡ್ ಆಗುತ್ತಿದೆ. ಇದನ್ನು ಹಿಡಿದುಕೊಂದು ಕೆಲವು ಟ್ರೋಲ್ ಪೇಜ್ ಅಡ್ಮಿನ್‌ಗಳು ನಿಮಗೂ ಪಟ್ಟಣಗೆರೆ ಶೆಡ್ ನಿಂದ ಫ್ರೆಂಡ್ ರಿಕ್ವೆಸ್ಟ್ ಬರಬಹುದು ಹುಷಾರ್ ಎಂದು ಟ್ರೋಲ್ ಮಾಡುತ್ತಿದ್ದಾರೆ.
Poll (Public Option)

Post a comment
Log in to write reviews