
ವೈದ್ಯರ ಎಡವಟ್ಟಿಗೆ ಆಸ್ಪತ್ರೆಯಲ್ಲಿ ರೋಗಿ ಸಾವನಪ್ಪಿರುವ ಘಟನೆ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ಕಕ್ಕೆಪದವಿನ ಪಿಲಿಬೈಲ್ ನಿವಾಸಿ 47 ವಷ೯ದ ಕೃಷ್ಣಪ್ಪ ಗೌಡ ಮೃತ ವ್ಯಕ್ತಿ ಎಂದು ತಿಳಿದು ಬಂದಿದೆ. ಮೇ 15 ರಂದು ವಿಪರೀತ ಜ್ವರವಿದ್ದ ಕಾರಣ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು . ಈ ಬಗ್ಗೆ ಪರೀಕ್ಷಿಸಿದ ವೈದ್ಯರು ನಾಲಿಗೆಯ ಅಡಿ ಭಾಗದಲ್ಲಿ ಗೆಡ್ಡೆಇದೆ ಎಂದು ಹೇಳಿದರು. ಬಳಿಕ ಗೆಡ್ಡೆಯನ್ನು ತೆಗೆಯಲು ಆಪರೇಷನ್ ಮಾಡಬೇಕೆಂದು ವೈದ್ಯರು ಮನೆಯವರಿಗೆ ಸೂಚನೆ ನೀಡಿದರು.ಈ ಬಗ್ಗೆ ಆಪರೇಷನ್ ಮಾಡಲು ಮೃತರ ಹೆಂಡತಿ ಸರೋಜಿನಿ ಮತ್ತು ಅತ್ತಿಗೆಯ ಮೂಲಕ ಸಹಿ ಹಾಕಿಸಿಕೊಂಡು ನಂತರ ಜ್ವರಕ್ಕೆಂದು ದಾಖಲಾದ ವ್ಯಕ್ತಿಗೆ ಕ್ಯಾನ್ಸರ್ ಇದೆ ಎಂದು ಇನ್ನೊಂದು ಅಚ್ಚರಿ ವಿಷಯ ವೈದ್ಯರು ತಿಳಿಸಿದರು.
ಬಳಿಕ ಗೆಡ್ಡೆಯ ಆಪರೇಷನ್ ಮಾಡಿದ ನಂತರ ವ್ಯಕ್ತಿ ಸಾವನಪ್ಪಿದ್ದು ವೈದ್ಯರ ವಿರುದ್ಧ ಸಂಬಂಧಿಕರು, ಸಾರ್ವಜನಿಕರು ರೊಚ್ಚಿಗೆದ್ದಿದ್ದಾರೆ.ರಾತ್ರೋರಾತ್ರಿ ಆಸ್ಪತ್ರೆ ಮುಂಭಾಗ ಜಮಾಯಿಸಿದ ಜನ, ವೈದ್ಯರ ಎಡವಟ್ಟಿನಿಂದಲೇ ವ್ಯಕ್ತಿಯು ಸಾವನ್ನಪಿರೊದು ಎಂದು ಆರೋಪಿಸಲಾಗಿದೆ.
Poll (Public Option)

Post a comment
Log in to write reviews