
ನವದೆಹಲಿ : ಪ್ಯಾರಿಸ್ ಒಲಿಂಪಿಕ್ಸ್ ಕುಸ್ತಿಯಲ್ಲಿ ಫೈನಲ್ ತಲುಪಿರುವ ವಿನೇಶಾ ಫೋಗಟ್ ಅವರನ್ನು ಫೈನಲ್ ಪಂದ್ಯದಿಂದ ಅನರ್ಹಗೊಳಿಸಲಾಗಿದೆ.
ಫೈನಲ್ ಇಂದು ನಡೆಯಲಿರುವುದರಿಂದ ಬೆಳಿಗ್ಗೆ ಆಕೆಯ ದೇಹ ತೂಕ ಪರೀಕ್ಷಿಸುವ ಸಂದರ್ಭ ಆಕೆ 50 ಕೆಜಿಗಿಂತ 100 ಗ್ರಾಂ ತೂಕ ಹೆಚ್ಚಿದ್ದಾರೆಂದು ತಿಳಿದು ಬಂದಿದ್ದು, ಈ ಕಾರಣಕ್ಕೆ ಅವರನ್ನು ಒಲಿಂಪಿಕ್ಸ್‌ನಿಂದ ಅನರ್ಹಗೊಂಡಿದ್ದಾರೆ. ಅವರ ತೂಕದಲ್ಲಿ 100 ಗ್ರಾಂವರೆಗೆ ಹೆಚ್ಚಳವಾಗಿದೆ ಎನ್ನಲಾಗಿದೆ.
ಮಂಗಳವಾರ ನಡೆದ 50 ಕೆ.ಜಿ ವಿಭಾಗದ ಮಹಿಳೆಯರ ಕುಸ್ತಿಯ ಸೆಮಿಫೈನಲ್ ನಲ್ಲಿ ವಿನೇಶಾ 5–0 ಯಿಂದ ಕ್ಯೂಬಾದ ಯುಸೇನೆಯಲಿಸ್ ಗುಜ್ಮನ್ ಲೊಪೇಜ್ ವಿರುದ್ಧ ಗೆದ್ದಿದ್ದರು. 50 ಕೆಜಿ ವಿಭಾಗದಲ್ಲಿ ಕೇವಲ ಚಿನ್ನ ಮತ್ತು ಕಂಚಿನ ಪದಕ ವಿಜೇತರಿರಲಿದ್ದಾರೆ.
Poll (Public Option)

Post a comment
Log in to write reviews