
ಟಿ 20ವಿಶ್ವಕಪ್ ನಲ್ಲಿ ಸೂಪರ್ 8 ಗೆ ಏರಲು ಹಲವು ತಂಡಗಳ ನಡುವೆ ಪೈಪೋಟಿ ನಡೆಯುತ್ತಿದೆ. ಪ್ರತಿ ತಂಡಗಳು ಲೆಕ್ಕಾಚಾರದಲ್ಲಿವೆ. ಇತ್ತ ಗೂಪ್ A ನಲ್ಲಿ ಲೆಕ್ಕಾಚಾರ ಜೋರಾಗಿದೆ. ಆಡಿರುವ ಎರಡು ಪಂದ್ಯಗಳ ಪೈಕಿ ಸೋಲು ಕಂಡಿರುವ ಪಾಕಿಸ್ತಾನದ ಸೂಪರ್ 8 ಹಾದಿ ಕೊಂಚ ಕಠಿಣವಾಗಿದೆ
ಗ್ರೂಪ್ A ಪಂದ್ಯದಲ್ಲಿ ಭಾರತ ಮತ್ತು ಅಮೆರಿಕಾ ಇದುವರೆಗೆ ಆಡಿರುವ ಎರಡು ಪಂದ್ಯಗಳಲ್ಲಿ ಎರಡನ್ನೂ ಗೆದ್ದು 4 ಅಂಕಗಳನ್ನು ಪಡೆದುಕೊಂಡಿವೆ. ಆದರೆ ಇತ್ತ ಪಾಕಿಸ್ತಾನ ಆಡಿರುವ ಎರಡು ಪಂದ್ಯದಲ್ಲಿ ಎರಡನ್ನೂ ಸೋತಿದೆ. ಪಾಕಿಸ್ತಾನ ತನ್ನ ಮುಂದಿನ ಎರಡು ಪಂದ್ಯಗಳನ್ನು ಗೆದ್ದರೂ ಕೂಡಾ ಕೇವಲ 4 ಅಂಕ ಪಡೆಯಲಿದೆ.
ಹೀಗಾಗಿ ಸೂಪರ್ 8 ತಲುಪಲು ಪಾಕಿಸ್ತಾನ ಬೇರೆ ತಂಡಗಳನ್ನ ಅವಲಂಬಿಸಬೇಕಿದೆ.
ಪಾಕಿಸ್ತಾನಕ್ಕೆ ಬೇಕು ಭಾರತದ ಸಹಾಯ
ಪಾಕಿಸ್ತಾನ ಮುಂದಿನ ಸುತ್ತಿಗೆ ಹೋಗಲು ಹೋಗಲು ಭಾರತದ ನೆರವು ಬೇಕೇ ಬೇಕು. ಪ್ರಸ್ತುತ ಪಾಕಿಸ್ತಾನದ ರನ್ ರೇಟ್ ಮೈನಸ್‌ನಲ್ಲಿದೆ ಅಮೇರಿಕಾದ ರನ್ ರೇಟ್ ಪ್ಲಸ್‌ನಲ್ಲಿದೆ. ಪಾಕ್ ಮುಂದಿನ ಎರಡು ಪಂದ್ಯ ಗೆದ್ದರೆ 4 ಅಂಕಗಳನ್ನು ಪಡೆಯುತ್ತದೆ. ಆದರೆ ಟಾಪ್ 2 ನಲ್ಲಿ ಪಾಕಿಸ್ತಾನ ಸ್ಥಾನವನ್ನು ಉಳಿಸಿಕೊಳ್ಳಬೇಕೆಂದರೆ ಅಮೆರಿಕಾಕ್ಕಿಂತ ಉತ್ತಮ ರನ್ ರೇಟ್ ಅನ್ನು ಪಡೆಯಬೇಕು. ಭಾರತ ಅಮೇರಿಕವನ್ನು ದೊಡ್ಡ ಅಂತರದಿಂದ ಸೋಲಿಸಿದರೆ. ಆಗ ಅಮೆರಿಕದ ನೆಟ್ ರನ್ ರೇಟ್ ಕಡಿಮೆಯಾಗುತ್ತದೆ. ಇದು ಪಾಕಿಸ್ತಾನಕ್ಕೆ ಲಾಭವಾಗಲಿದೆ.
Poll (Public Option)

Post a comment
Log in to write reviews