
ಬೆಂಗಳೂರು: ಪಾಕಿಸ್ತಾನಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಅವಿನಾಭಾವ ನಂಟು ಎಂದು ಬಿಜೆಪಿ ಕಿಡಿ ಕಾರಿದ್ದು, ಸಿಎಂ ಅವರ ನೈತಿಕತೆಯನ್ನು ಪ್ರಶ್ನಿಸಿದೆ.
ಚಿಕ್ಕೋಡಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ ಜಾರಕಿಹೊಳಿ ಅವರು ಗೆಲುವು ಸಾಧಿಸಿದ್ದರು. ಮಂಗಳವಾರ ನಡೆದ ಸಂಭ್ರಮಾಚರಣೆಯಲ್ಲಿ ಜಮೀರ್ ಎಂಬಾತ ಪಾಕಿಸ್ತಾನ್ ಪರವಾದ ಘೋಷಣೆ ಕೂಗಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿರುವ ಬಿಜೆಪಿ, ಪಾಕಿಸ್ತಾನ ಪರ ಘೊಷಣೆ ಕೂಗಿದವನನ್ನು ಜೈಲಿಗೆ ಅಟ್ಟುತ್ತಿರೋ ಇಲ್ಲವೇ ಅಮಾಯಕ ಸಹೋದರ ಎಂದು ರಕ್ಷಿಸುತ್ತಿರೋ ಎಂದು ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದೆ.
ಎಲ್ಲರೂ ಸಂಭ್ರಮಾಚರಣೆಯಲ್ಲಿ ದೇವರನ್ನು ನೆನೆದರೆ, ಕಾಂಗ್ರೆಸ್ಸಿಗರು ಪಾಕಿಸ್ತಾನವನ್ನು ನೆನೆಯುತ್ತಾರೆ, ಬಹುಶಃ ಪಾಕಿಸ್ತಾನವೇ ಕಾಂಗ್ರೆಸ್ಸಿಗರಿಗೆ ದೇವರು ಎಂದೆನಿಸುತ್ತದೆ ಎಂದು ಬಿಜೆಪಿ ತಿವಿದಿದೆ.
Poll (Public Option)

Post a comment
Log in to write reviews