
ಮೈಸೂರು: ದೇವರಾಜು ಎಂಬ ವ್ಯಕ್ತಿ ನೀಡಿದ್ದ ದೂರು ಆಧಾರದ ಮೇಲೆ, 3ನೇ ಅಪರ ಜಿಲ್ಲಾ ಸತ್ರ ಮತ್ತು ಲೋಕಾಯುಕ್ತ ವಿಶೇಷ ನ್ಯಾಯಾಲಯ ನ್ಯಾಯಾದೀಶರು (3rd Additional District Sessions and Lokayukta Special Court Judge) ಲಂಚಕ್ಕೆ ಬೇಡಿಕೆ ಇಟ್ಟಿದ್ದ ವೈದ್ಯನಿಗೆ ನಾಲ್ಕು ವರ್ಷ ಶಿಕ್ಷೆ ಹಾಗೂ 50 ಸಾವಿರ ದಂಡ ವಿಧಿಸಿ ಆದೇಶ ನೀಡಿದ್ದಾರೆ. ಕೆ ಆರ್ ಆಸ್ಪತ್ರೆಯ ಮೂಳೆ ಶಸ್ತ್ರಚಿಕಿತ್ಸಕ ಡಾ ಪುಟ್ಟಸ್ವಾಮಿ ಮೇಲೆ ದೇವರಾಜು ಎಸಿಬಿ ಗೆ ದೂರನ್ನು ನೀಡಿದ್ದರು. 2017 ರ ಏಪ್ರಿಲ್ 12 ರಂದು ದೇವರಾಜು ಬಳಿ ಡಾ ಪುಟ್ಟಸ್ವಾಮಿ 40 ಸಾವಿರಕ್ಕೆ ಬೇಡಿಕೆ ಇಟ್ಟಿದ್ದನಂತೆ. ಅದರಂತೆ ಡಾ. ಪುಟ್ಟಸ್ವಾಮಿ 26 ಸಾವಿರ ಲಂಚ ಸ್ವೀಕರಿಸುವಾಗ ಎಸಿಬಿ ಪೊಲೀಸರ ಬಲೆಗೆ ಬಿದ್ದಿದ್ದ. ಆರೋಪಿ ಪುಟ್ಟಸ್ವಾಮಿ ವಿರುದ್ಧ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯವು ವಿಚಾರಣೆ ನಡೆಸಿ ಆರೋಪ ಸಾಬೀತಾದ ಹಿನ್ನೆಲೆ ಆರೋಪಿ ಡಾ ಪುಟ್ಟಸ್ವಾಮಿಗೆ ನಾಲ್ಕು ವರ್ಷ ಶಿಕ್ಷೆ ಹಾಗೂ 50 ಸಾವಿರ ದಂಡ ವಿಧಿಸಿದೆ.
Poll (Public Option)

Post a comment
Log in to write reviews