
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಉಪೇಂದ್ರ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ವಿಚಾರಣೆ ಪಾರದರ್ಶಕವಾಗಿದ್ದರೆ ಎಲ್ಲಾ ಊಹಾಪೋಹಗಳಿಗೆ ತೆರೆ ಬೀಳುತ್ತೆ ಎಂದು ಹೇಳಿದ್ದಾರೆ.
ಈ ಬಗ್ಗೆ ಇನ್ಸ್ಟಾಗ್ರಾಂ ಖಾತೆಯಲ್ಲಿ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯ ಫೋಟೋ ಹಂಚಿಕೊಂಡು ಪೋಸ್ಟ್ ಹಾಕಿರುವ ಉಪೇಂದ್ರ, ವಿಚಾರಣೆ ಪಾರದರ್ಶಕವಾಗಿದ್ದರೆ ಎಲ್ಲಾ ಊಹಾಪೋಹಗಳಿಗೆ ತೆರೆ ಬೀಳುತ್ತೆ. ಸಾರ್ವಜನಿಕ ವ್ಯಕ್ತಿಯ ವಿಚಾರಣೆ ಸಾರ್ವಜನಿಕವಾಗಿಯೇ ಮುಕ್ತವಾಗಿ ಮಾಡಬೇಕು. ವಿಚಾರಣೆಯನ್ನು ರೆಕಾರ್ಡ್ ಅಥವಾ ಲೈವ್ ಸ್ಟ್ರೀಮಿಂಗ್ ಕೂಡ ಮಾಡಬಹುದು. ಆಗ ಸಾಕ್ಷಿನಾಶ ಹಾಗೂ ಪ್ರಭಾವಿಗಳ ಹಸ್ತಕ್ಷೇಪಕ್ಕೆ ಕಡಿವಾಣ ಹಾಕಬಹುದು ಎಂದು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ
Poll (Public Option)

Post a comment
Log in to write reviews