ತಿರುಪತಿಯಲ್ಲಿ ‘ಗೋವಿಂದ ಗೋವಿಂದ’ ಘೋಷ ಮಾತ್ರ ಮೊಳಗಬೇಕು: ಚಂದ್ರಬಾಬು ನಾಯ್ಡು

ತಿರುಮಲ: ತಿರುಪತಿಯಲ್ಲಿ ಏಡುಕುಂಡಲವಾಡ ಸ್ವಾಮಿ ಗೋವಿಂದ, ಗೋವಿಂದ ಎಂಬ ಘೋಷ ಮಾತ್ರ ಕೇಳಬೇಕೆಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಹೇಳಿದರು.
ಚಂದ್ರಬಾಬು ನಾಯ್ಡು ಕುಟುಂಬದ ಸದಸ್ಯರ ಜೊತೆಯಲ್ಲಿ ಗುರುವಾರ ತಿರುಪತಿಯಲ್ಲಿ ತಿಮ್ಮಪ್ಪನ ದರ್ಶನ ಪಡೆದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಿರುಮಲ ಒಂದು ಪವಿತ್ರ ಕ್ಷೇತ್ರ, ದೇವಸ್ಥಾನದ ಪಾವಿತ್ರ್ಯತೆಯನ್ನು ರಕ್ಷಿಸಬೇಕು. ಹೀಗಾಗಿ ಬೆಟ್ಟದಲ್ಲಿ ಭಕ್ತರಿಗೆ ಶಾಂತಿಯುತವಾಗಿ ತಂಗಲು ಹಾಗೂ ದರ್ಶನಕ್ಕೆ ಪ್ರಯತ್ನಿಸಲಾಗುವುದು ಎಂದರು.
ತಿರುಮಲ ದೇವಸ್ಥಾನ ಹಿಂದೂಗಳಿಗೆ ಸೇರಿದ್ದು ಇಲ್ಲಿ ರಾಜಕೀಯ ಹೇಳಿಕೆಗಳು, ಘೋಷಣೆಗಳು ಕೇಳಬಾರದು ಕೇವಲ ‘‘ಗೋವಿಂದ ಗೋವಿಂದ’’ ಎಂಬ ಘೋಷ ಮಾತ್ರ ಮೊಳಗಬೇಕು. ಕಳೆದ ಐದು ವರ್ಷಗಳಲ್ಲಿ ಪವಿತ್ರ ದೇವಾಲಯದ ಪಾವಿತ್ರ್ಯತೆ ಹಾಳಾಗಿದೆ, ಶಕ್ತಿಶಾಲಿಗಳ ಮನೆ ಬಾಗಿಲಿಗೆ ದೇವರನ್ನು ಕೊಂಡೊಯ್ಯುವುದನ್ನು ಎಂದಾದರೂ ನೀವು ಕೇಳಿದ್ದೀರಾ. ಇಲ್ಲಿ ಡ್ರಗ್ಸ್, ಮದ್ಯ ಮಾಂಸ ಸೇವನೆಗೆ ಅವಕಾಶ ಕಲ್ಪಿಸಲಾಗಿತ್ತು, ಕಳೆದ ಐದು ವರ್ಷಗಳಲ್ಲಿ ಬೆಟ್ಟದಲ್ಲಿ ಆಹಾರದ ಗುಣಮಟ್ಟವೂ ಹದಗೆಟ್ಟಿದೆ, ತಿರುಮಲ ಬೆಟ್ಟದಲ್ಲಿ ಗೋವಿಂದ ಗೋವಿಂದ ಘೋಷ ಕೇಳಬೇಕೇ ಹೊರತು ರಾಜಕೀಯ ಘೋಷಣೆಗಳಲ್ಲ ಎಂದರು.
Poll (Public Option)

Post a comment
Log in to write reviews