
ಬೆಂಗಳೂರು: ದೇಶಾದ್ಯಂತ ಜುಲೈ 1 ರಿಂದ ಮೂರು ಹೊಸ ಕ್ರಿಮಿನಲ್ ಕಾನೂನುಗಳು ಜಾರಿಗೆ ಬಂದಿದ್ದು ಬೆಂಗಳೂರಿನಲ್ಲಿ ಮೊದಲ ದಿನವೇ ಒಟ್ಟು 39 ಪ್ರಕರಣಗಳು ದಾಖಲಾಗಿವೆ ಎಂದು ವರದಿ ಮಾಡಿದೆ.
ಮೂರು ಹೊಸ ಕ್ರಿಮಿನಲ್ ಕಾನೂನುಗಳು - ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷಿ ಅಧಿನಿಯಮ್ ಜುಲೈ 1 ರಂದು ದೇಶಾದ್ಯಂತ ಜಾರಿಗೆ ಬಂದವು. ವ್ಯಾಪಕ ಬದಲಾವಣೆಗಳಿಗಾಗಿ ಹೊಸ ಕಾನೂನುಗಳನ್ನು ಪರಿಚಯಿಸಲಾಗಿದೆ.
ಈ ಹೊಸ ಕಾನೂನುಗಳ ಅಡಿಯಲ್ಲಿ ವೈಟ್‌ಫೀಲ್ಡ್ ವಿಭಾಗದಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ದಾಖಲಾಗಿವೆ. ಮೊದಲ ದಿನವೇ ಬೆಂಗಳೂರು ಆಗ್ನೇಯ ಭಾಗದಲ್ಲಿ 6, ಪಶ್ಚಿಮದಲ್ಲಿ 5, ದಕ್ಷಿಣ ಮತ್ತು ಪೂರ್ವದಲ್ಲಿ 4, ಈಶಾನ್ಯದಲ್ಲಿ 3 ಮತ್ತು ಉತ್ತರ ಮತ್ತು ಕೇಂದ್ರ ವಿಭಾಗದಲ್ಲಿ ತಲಾ 2 ಪ್ರಕರಣಗಳು ದಾಖಲಾಗಿವೆ. ಇತರೆ ನಾಲ್ಕು ಪ್ರಕರಣಗಳನ್ನು ಸಂಚಾರ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಮೂರು ಹೊಸ ಕಾನೂನುಗಳ ಅಡಿಯಲ್ಲಿ ಒಟ್ಟು 80 ಎಫ್‌ಐಆರ್‌ಗಳನ್ನೂ ಸಹ ದಾಖಲಿಸಲಾಗಿವೆ ಎಂದು ತಿಳಿದಿದೆ.
Poll (Public Option)

Post a comment
Log in to write reviews