ಟಾಪ್ 10 ನ್ಯೂಸ್
ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಾಣವಾಗಿದ್ದ ಮನೆ ತೆರವುಗೊಳಿಸಲು ಮುಂದಾದ ಅಧಿಕಾರಿಗಳು

ಬೆಂಗಳೂರು : ನಗರದ ಹುಣಸಮಾರನಹಳ್ಳಿ ಪುರಸಭಾ ವ್ಯಾಪ್ತಿಯ ಕಾಡಿಗನಹಳ್ಳಿ ಸರ್ವೇ ನಂಬರ್ 30 ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿದ್ದ ಮನೆಯನ್ನ ಇಂದು (ಜೂನ್ 12 ರಂದು) ತೆರವುಗೊಳಿಸಲು ಅಧಿಕಾರಿಗಳು ಮುಂದಾದರು.
ತಾರಾಸಿಂಗ್ ಎಂಬಾತನು ಸರ್ಕಾರಿ ಕೆರೆ ಜಮೀನಿಗೆ ಮಣ್ಣು ತುಂಬಿಸಿ ಮನೆ ನಿರ್ಮಾಣ ಮಾಡಲಾಗಿತ್ತು. ಈ ಹಿನ್ನಲೆ ಕಾಡಿಗನಹಳ್ಳಿ ಗ್ರಾಮ ಪಂಚಾಯತ್ ಅಧಿಕಾರಿ ರೂಪೇಶ್ ಅವರು ಯಲಹಂಕ ತಾಲೂಕು ಪಂಚಾಯತ್ ಗಮನಕ್ಕೆ ತಂದಿದ್ದು ತಹಸೀಲ್ದಾರ್ ಅವರು ಮನೆ ತೆರವುಗೊಳಿಸುವಂತೆ ನೋಟೀಸ್ ಜಾರಿಗೋಳಿಸಿದ್ದರು. ಈ ಆಧಾರದ ಮೇಲೆ ಖುದ್ದು ಡೆಪ್ಯೂಟಿ ತಹಸೀಲ್ದಾರ್ ರವಿಪ್ರಸಾದ್ ನೇತೃತ್ವದಲ್ಲಿ ಚಿಕ್ಕಜಾಲ ಪೊಲೀಸ್ ಅವರ ಬಂದೂಬಸ್ತಿನಲ್ಲಿ ಅಕ್ರಮ ಮನೆಯನ್ನ ತೆರವುಗೊಳಿಸಲು ಕಾಡಿಗನಹಳ್ಳಿ ಗ್ರಾಮ ಪಂಚಾಯತಿ ಮುಂದಾಯಿತು.
Poll (Public Option)

Post a comment
Log in to write reviews