
ಹಾಸನ: ಸಿಎಂ ಸಿದ್ದರಾಮಯ್ಯ ಅವರು ಇಂದು ಹಾಸನದ ಅದಿ ದೇವತೆ ಹಾಸನಾಂಬೆಯ ದೇವಲಯ ದರ್ಶನ ಪಡೆದಿದ್ದಾರೆ.
ಹಾಸನಾಂಬೆ ದರ್ಶನ ಬಂದಿದ್ದ ಸಿಎಂ ಸಿದ್ದರಾಮಯ್ಯ ಅವರು ಹಾಸನಾಂಬೆ ದೇವಿ ದರ್ಶನ ಪಡೆಯುವಾಗ ಅಷ್ಟೋತ್ತರದಿಂದ ಪೂಜೆ ಮಾಡುವುದು ವಾಡಿಕೆ. ಅದರೆ ಪೂಜೆಯ ವೇಳೆ ಹಾಸನಾಂಬೆಗೆ ಖಡ್ಗಮಾಲಾ ಸ್ತೋತ್ರದ ಮೂಲಕ ಸಿಎಂ ಅರ್ಚನೆ ಮಾಡಿಸಿದ್ದಾರೆ. ಈ ಬಾರಿ ಖಡ್ಗಮಾಲಾ ಸ್ತೋತ್ರದ ಮೂಲಕ ದೇವಿಯನ್ನು ಅರ್ಚಿಸಿದ್ದು ವಿಶೇಷವಾಗಿತ್ತು. ಖಡ್ಗಮಾಲಾ ಸ್ತೋತ್ರವನ್ನು ಪಠಿಸುವುದರಿಂದ ಅತೀಂದ್ರಿಯ ಆಯುಧಗಳ ರಕ್ಷಣಾತ್ಮಕ ಮಾಲೆ ಸಿಗುತ್ತದೆ ಎಂಬ ನಂಬಿಕೆ ಇದೆ. ಖಡ್ಗಮಾಲಾ ಸ್ತೋತ್ರ ಶಕ್ತಿ ದೇವಿಯ ಅತ್ಯಂತ ಪವಿತ್ರ ಮತ್ತು ಶಕ್ತಿಯುತ ಮಂತ್ರವಾಗಿದೆ. ಜೊತೆಗೆ ಎಲ್ಲಾ ರೀತಿಯ ಸಮಸ್ಯೆಗಳಿಂದ ಖಡ್ಗಮಾಲಾ ಸ್ತೋತ್ರ ಮುಕ್ತಿ ನೀಡುತ್ತದೆ ಎನ್ನುವ ನಂಬಿಕೆ ಇದೆ
Poll (Public Option)

Post a comment
Log in to write reviews