ಸೆಪ್ಟೆಂಬರ್ 27ರಂದು ‘ದೇವರ ಚಾಪ್ಟರ್ 1’ ಸಿನಿಮಾ ರಿಲೀಸ್ ಆಗಿದ್ದು, 90ರ ದಶಕದಲ್ಲಿ ಸಿನಿಮಾದ ಕಥೆ ಸಾಗುತ್ತದೆ. ಈ ಚಿತ್ರದಲ್ಲಿ ಜೂನಿಯರ್ ಎನ್ಟಿಆರ್ ಮುಖ್ಯಭೂಮಿಕೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಈ ಸಿನಿಮಾವು ವಿಶ್ವಬಾಕ್ಸ್ ಆಫೀಸ್ನಲ್ಲಿ ಮೊದಲ ದಿನ ಅಬ್ಬರದ ಗಳಿಕೆ ಮಾಡಿತ್ತು. ಆದರೆ ದಿನ ಕಳೆದಂತೆ ಗಳಿಕೆ ತಗ್ಗಿದ್ದರ ಪರಿಣಾಮ ಈ ಚಿತ್ರ ವಿಶ್ವ ಬಾಕ್ಸ್ ಆಫೀಸ್ನಲ್ಲಿ 325 ಕೋಟಿ ರೂಪಾಯಿ ಆಗಿದೆ. ಒಟ್ಟಾರೆ ಗಳಿಕೆ 500 ಕೋಟಿ ರೂಪಾಯಿ ದಾಟುವ ನಿರೀಕ್ಷೆ ಇದೆ. ಭಾನುವಾರಕ್ಕೆ (ಸೆಪ್ಟೆಂಬರ್ 29) ಹೋಲಿಕೆ ಮಾಡಿದರೆ ಸೋಮವಾರದ (ಸೆಪ್ಟೆಂಬರ್ 30) ಗಳಿಕೆಯಲ್ಲಿ ಶೇ.68 ಇಳಿಕೆ ಕಂಡಿದೆ ಎನ್ನಲಾಗಿದೆ.
ಭಾನುವಾರ ಈ ಸಿನಿಮಾ ಸುಮಾರು 40 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಆದರೆ ಬಾಕ್ಸ್ ಆಫೀಸ್ ವರದಿ ಪ್ರಕಾರ 12.5 ಕೋಟಿ ರೂಪಾಯಿ ಗಳಿಸಲಷ್ಟೇ ಶಕ್ಯವಾಗಿದೆ. ತೆಲುಗು, ಕನ್ನಡ, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಿಂದ ಇಷ್ಟು ಗಳಿಕೆ ಆಗಿದೆ. ಸೋಮವಾರ ತೆಲುಗು ವರ್ಷನ್ನಿಂದ 8 ಕೋಟಿ ರೂಪಾಯಿ ಹರಿದು ಬಂದಿದೆ. ಭಾನುವಾರ 27 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು. ಹಿಂದಿಯಿಂದ ಸೋಮವಾರ 4 ಕೋಟಿ ರೂಪಾಯಿ ಹಾಗೂ ಭಾನುವಾರ 10 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಬುಧವಾರ (ಅಕ್ಟೋಬರ್ 2) ಗಾಂಧೀ ಜಯಂತಿ ಪ್ರಯುಕ್ತ ಸಿನಿಮಾ ಮತ್ತಷ್ಟು ಗಳಿಕೆ ಮಾಡೋ ಸಾಧ್ಯತೆ ಇದೆ.
ಜೂನಿಯರ್ ಎನ್ಟಿಆರ್ರವರು 2018ರಲ್ಲಿ ರಿಲೀಸ್ ಆದ ‘ಅರವಿಂದ ಸಮೇತ’ ಬಳಿಕ ಅವರು ಸೋಲೋ ಹೀರೋ ಆಗಿ ಕಾಣಿಸಿಕೊಂಡಿದ್ದು ‘ದೇವರ’ ಸಿನಿಮಾದಲ್ಲಿ. ಈ ಚಿತ್ರಕ್ಕೆ ಕೊರಟಾಲ ಶಿವ ನಿರ್ದೇಶನ ಮಾಡಿದ್ದಾರೆ. ಸದ್ಯ ಜೂನಿಯರ್ ಎನ್ಟಿಆರ್ ಅವರು ‘ವಾರ್ 2’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದಲ್ಲಿ ಹೃತಿಕ್ ರೋಷನ್ ಕೂಡ ಇದ್ದು, 2025ರಲ್ಲಿ ಸಿನಿಮಾ ರಿಲೀಸ್ ಆಗುವ ನಿರೀಕ್ಷೆ ಇದೆ ಎನ್ನಲಾಗಿದೆ.
Post a comment
Log in to write reviews