
ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಎ1 ಆರೋಪಿ ಪವಿತ್ರಾ ಗೌಡಗೆ ಮೇಕಪ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದ ಎಸ್‌ಐ ನೇತ್ರಾವತಿಗೆ ಈಗ ನೊಟೀಸ್ ನೀಡಲಾಗಿದೆ.
ಪೊಲೀಸ್ ಅಧಿಕಾರಿ ನೇತ್ರಾವತಿ ಅವರು ಪವಿತ್ರಾ ಗೌಡಗೆ ಮೇಕಪ್ ಕಿಟ್ ಬಳಸಲು ಅವಕಾಶ ಕೊಟ್ಟಿದ್ದರು ಎಂಬ ಆರೋಪ ಕೇಳಿಬಂದಿದ್ದು, ಕರ್ತವ್ಯ ಲೋಪ ಎಸಗಿರುವ ಹಿನ್ನೆಲೆಯಲ್ಲಿ ಎಸ್‌ಐ ವಿರುದ್ಧ ನೋಟೀಸ್ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಪೊಲೀಸ್ ಕಸ್ಟಡಿಯಲ್ಲಿರುವಾಗಲೇ ಪವಿತ್ರಾ ಗೌಡ ಮೇಕಪ್ ಮಾಡಿಕೊಂಡಿದ್ದಳು. ಮೇಕಪ್ ಇಲ್ಲದೆ ಒಂದು ದಿನವೂ ಆಕೆ ಇರುತ್ತಿರಲಿಲ್ಲ ಇದಕ್ಕೆ ಪುಷ್ಟಿ ನೀಡುವಂತೆ ರಾಜರಾಜೇಶ್ವರಿ ನಗರದಲ್ಲಿರುವ ಮನೆಗೆ ಸ್ಥಳ ಮಹಜರಿಗೆ ಹೋಗಿ ಹಿಂತಿರುವಾಗ ಮೇಕಪ್ ಮಾಡಿಕೊಂಡು ತುಟಿಗೆ ಲಿಪ್‌ಸ್ಟಿಕ್ ಹಾಕಿಕೊಂಡು ಹೊರಬಂದಿದ್ದಳು. ಇದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಜೊತೆಗೆ ಪೊಲೀಸರ ವಿರುದ್ಧ ಬಹಳಷ್ಟು ಟೀಕೆ ಕೂಡ ವ್ಯಕ್ತವಾಗಿತ್ತು.
Poll (Public Option)

Post a comment
Log in to write reviews