
11 ವಿಧಾನಪರಿಷತ್ ಸ್ಥಾನಕ್ಕೆ ಜೂನ್ 6ರಂದು ಚುನಾವಣೆ ಹಿನ್ನೆಲೆ, ಅಲೆಮಾರಿ ಬುಡಕಟ್ಟು ಮಹಾಸಭಾ ರಾಜ್ಯ ಸಮಿತಿ ಸದಸ್ಯ ವಡ್ಡರಗುಡಿ ಚಿಕ್ಕಣ್ಣ, ಸಿ ಎಸ್ ದ್ವಾರಕನಾಥ್ಗೆ ಎಂಎಲ್ ಸಿ ಟಿಕೆಟ್ ನೀಡುವಂತೆ ಮೈಸೂರಿನ ಪತ್ರಕರ್ತರ ಭವನದಲ್ಲಿ ಅಲೆಮಾರಿ ಬುಡಕಟ್ಟು ಮಹಾಸಭಾ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಸಿ ಎಸ್ ದ್ವಾರಕನಾಥ್ ಅವರು 120 ಸಮುದಾಯವನ್ನ ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದಾರೆ. ಈ ಸಮುದಾಯಕ್ಕೆ ಅನ್ಯಾಯವಾದಾಗ ನಮ್ಮ ಜೊತೆ ನಿಂತಿದ್ದಾರೆ. ನಮ್ಮ ಸಹಕಾರ ಪಡೆದು ಹಲವರು ರಾಜಕೀಯ ಅಧಿಕಾರ ಅನುಭವಿಸಿದ್ದಾರೆ. ಎಸ್ಸಿ,ಎಸ್ಟಿ ಒಬಿಸಿ ಸಮುದಾಯವನ್ನ ಒಟ್ಟಾಗಿ ಕಾಣುತ್ತಿರುವುದು ಕಾಂಗ್ರೆಸ್ ಪಕ್ಷ. ಹಾಗಾಗಿ ಈ ಬಾರಿಯ ಪರಿಷತ್ ಚುನಾವಣೆಯಲ್ಲಿ ದ್ವಾರಕನಾಥ್ ಅವರಿಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದರು.
Poll (Public Option)

Post a comment
Log in to write reviews