
ಗೋವಾ ಸರ್ಕಾರ ಕೈಗೊಂಡಿರುವ ಹೊಸ ನಿರ್ಧಾರ ಪ್ರವಾಸಿಗರಿಗೆ ಶಾಕ್ ನೀಡುವಂತಿದ್ದು, ಹೊಸ ಕಾಯ್ದೆ ಪ್ರಕಾರ ಬೀಜ್‌ಗಳಲ್ಲಿ ಈಜುವಂತಿಲ್ಲ.
ಜಲಪಾತಗಳು, ಸಮುದ್ರಗಳು ಮತ್ತಿತರ ಜಲಮೂಲಗಳಲ್ಲಿ ಈಜುವುದನ್ನು ನಿಷೇಧಿಸಿ ಗೋವಾ ಸರ್ಕಾರ ಆದೇಶ ಹೊರಡಿಸಿದೆ. ಮುಂಗಾರು ಆರಂಭಕ್ಕೂ ಮುನ್ನ ಜಲಮೂಲಗಳಲ್ಲಿ ಈಜುವುದನ್ನು ನಿಷೇಧಿಸಿದ್ದು ಪ್ರವಾಸಿಗರು ಗೋವಾದ ಪ್ರದೇಶಗಳಲ್ಲಿ ಈಜಲು ಹೋದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
ಜಲಪಾತಗಳು, ಕೈಬಿಟ್ಟ ಕಲ್ಲುಗಣಿಗಳು, ನದಿಗಳು, ಸರೋವರಗಳು ಮತ್ತು ಇತರ ಜಲಮೂಲಗಳಲ್ಲಿ ಜನರು ಕೊಚ್ಚಿಕೊಂಡು ಹೋಗುತ್ತಿದ್ದು ಇಂತಹ ಜಲಮೂಲಗಳಲ್ಲಿ ಈಜುವುದು ಸುರಕ್ಷಿತವಲ್ಲ ಎಂದು ಅಧಿಕಾರಿಗಳು ತಿಳಿರುವುದರಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಈಜು ನಿಷೇಧ ಆದೇಶ ಪಾಲಿಸದಿದ್ದರೆ ಕಾನೂನು ಉಲ್ಲಂಘನೆಯಾಗುತ್ತದೆ ಎಂದು ಉತ್ತರ ಮತ್ತು ದಕ್ಷಿಣ ಗೋವಾದ ಜಿಲ್ಲಾಧಿಕಾರಿಗಳು ಹೊರಡಿಸಿದ ಸುತ್ತೋಲೆಯಲ್ಲಿದೆ. ಮಾನವ ಜೀವ ಮತ್ತು ಸಾರ್ವಜನಿಕ ಸುರಕ್ಷತೆಗೆ ಯಾವುದೇ ಅಪಾಯ ತಪ್ಪಿಸಲು ಈ ನಿಟ್ಟಿನಲ್ಲಿ ತಕ್ಷಣ ಕ್ರಮ ತೆಗೆದುಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.
Poll (Public Option)

Post a comment
Log in to write reviews