ಕರ್ನಾಟಕ
ಮೈಸೂರು ಅರಮನೆ ನೋಡಲು ಕ್ಯೂನಲ್ಲಿ ನಿಲ್ಲಬೇಕಿಲ್ಲ; ವಾಟ್ಸಾಪ್ ನಲ್ಲೇ ಸಿಗುತ್ತೆ ಟಿಕೆಟ್

ಮೈಸೂರು : ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ (Mysuru Dasara) ಮಹೋತ್ಸವ ಅಗಸ್ಟ್.3 ರಿಂದ ಅಗಸ್ಟ್.12 ರ ವರೆಗೆ ನಡೆಯಲಿದೆ. ದಸರಾಕ್ಕೆ ಈಗಾಗಲೇ ತಯಾರಿ ಶುರುವಾಗಿದೆ. ಇನ್ನು ಮತ್ತೊಂದೆಡೆ ಇಂದಿನಿಂದ ಮೈಸೂರು ಅರಮನೆ ವೀಕ್ಷಣಗೆ ವಾಟ್ಸಾಪ್ ಟಿಕೆಟ್ ನೀಡಲಾಗುತ್ತಿದೆ. ಮೈಸೂರು ಅರಮನೆ (Mysuru Palace) ನೋಡಲು ಬರುವ ಪ್ರವಾಸಿಗರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ EDCS ಮೊಬೈಲ್ ಒನ್ ಯೋಜನೆಯ ಮೂಲಕ ಟಿಕೆಟ್ ಖರೀದಿಗೆ ಅವಕಾಶ ಮಾಡಿಕೊಡಲಾಗುತ್ತಿದೆ.
ಪ್ರವಾಸಿಗರು ಸರ್ಕಾರದ ಇಡಿಸಿಎಸ್ ಮೊಬೈಲ್ ಒನ್ ಯೋಜನೆಯ ಮೂಲಕ ಮೊಬೈಲ್ನಲ್ಲೆ ಅರಮನೆ ವೀಕ್ಷಣೆಗೆ ಟಿಕೆಟ್ ಖರೀದಿ ಮಾಡಬಹುದು. ವಾಟ್ಸಾಪ್ನಲ್ಲಿ 8884160088 ನಂಬರ್ಗೆ ಎಜಿ ಎಂದು ಟೈಪ್ ಮಾಡಿ ಸಂದೇಶ ಕಳಿಸುವ ಮೂಲಕ ಟಿಕೆಟ್ ಪಡೆಯಬಹುದು. ವಾಟ್ಸಾಪ್ನಲ್ಲಿ ಖರೀದಿಸಿದ ಟಿಕೆಟ್ 5 ದಿನದವರೆಗೆ ಮಾನ್ಯತೆ ಇರುತ್ತದೆ. ಇದರಿಂದ ಸರತಿ ಸಾಲಿನಲ್ಲಿ ಬಂದು ಟಿಕೆಟ್ ಖರೀದಿಸುವ ಅವ್ಯಶಕತೆ ಇರುವುದಿಲ್ಲ
Poll (Public Option)

Post a comment
Log in to write reviews