ಟಾಪ್ 10 ನ್ಯೂಸ್
ಡ್ರೈವಿಂಗ್ ಲೈಸನ್ಸ್ ಪಡೆಯಲು ಆರ್ ಟಿ ಓ ಗೆ ಹೋಗಬೇಕಾಗಿಲ್ಲ: ಜೂನ್ 01 ರಿಂದ ಬರಲಿದೆ ಹೊಸ ನಿಯಮ

ಜೂನ್ 1ರಿಂದ ಎಲ್‌ಎಲ್‌ಆರ್ ಮತ್ತು ಡಿಎಲ್(DRIVING LICENCE) ಪಡೆಯಲು ಆರ್‌ಟಿಓ (RTO) ಕಚೇರಿಗಳಿಗೆ ಹೋಗಬೇಕಿಲ್ಲ. ಆಯ್ದ ಖಾಸಗಿ ಕೇಂದ್ರಗಳಲ್ಲಿ ಡಿಎಲ್ ಪಡೆದುಕೊಳ್ಳಬಹುದು ಎಂಬ ಕಾನೂನನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ.
ಎಲ್‌ಎಲ್‌ಆರ್ ಮತ್ತು ಡಿಎಲ್ ಪಡೆಯುವ ಪ್ರಕ್ರಿಯೆಯನ್ನು ಸರಳ ಮತ್ತು ಶೀಘ್ರಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದಿಂದ ಸಾರಿಗೆ ನೀತಿಯಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ.
ಆರ್‌ಟಿಓ ಕಚೇರಿಗಳಲ್ಲಿ ಡಿಎಲ್ ಪಡೆಯಲು ಬರುವ ಜನಸಂದಣಿಯನ್ನ ತಪ್ಪಿಸಲು ಕೇಂದ್ರ ಸರ್ಕಾರ ಹೊಸ ಕ್ರಮ ಜಾರಿಗೊಳಿಸಲಿದೆ. ಖಾಸಗಿಯವರಿಗೆ ಡಿಎಲ್ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡಲಾಗುವುದು. ಎಲ್‌ಎಲ್‌ಆರ್ ಮತ್ತು ಡಿಎಲ್ ಗೆ ಅರ್ಜಿಯನ್ನು ಅರ್.ಟಿ.ಓ. ಕಚೇರಿಯಲ್ಲಿ ಸಲ್ಲಿಸಬೇಕು. ತಮಗೆ ಸಮೀಪದ ಖಾಸಗಿ ಡಿಎಲ್ ಕೇಂದ್ರದ ಹೆಸರು ಸೂಚಿಸಬೇಕು. ಆರ್‌ಟಿಓ ಕಚೇರಿ ಬಳಿ ಹೋಗಿ ವಾಹನ ಓಡಿಸಬೇಕಿಲ್ಲ. ಡ್ರೈವಿಂಗ್ ಲೈಸೆನ್ಸ್ ಪಡೆಯುವ ಪ್ರಕ್ರಿಯನ್ನ ಖಾಸಗಿ ಕೇಂದ್ರದಲ್ಲಿಯೇ ಪೂರ್ಣಗೊಳಿಸಬಹುದಾಗಿದೆ.
Poll (Public Option)

Post a comment
Log in to write reviews