2024-12-24 07:09:58

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಎನ್‌ಡಿಎ ಸಂಪುಟದಲ್ಲಿ ಮುಸ್ಲಿಂ ಸಚಿವರಿಲ್ಲ: ದೇಶದ ಇತಿಹಾಸದಲ್ಲಿ ಇದೇ ಮೊದಲು

ನವದೆಹಲಿ: ಸ್ವಾತಂತ್ರ್ಯ ಭಾರತದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಯಾವುದೇ ಮುಸ್ಲಿಂ ಸಮುದಾಯದ ಸಚಿವರಿಲ್ಲದ ಕೇಂದ್ರ ಸಚಿವ ಸಂಪುಟ ರಚನೆಯಾಗಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ ಹಲವು ರಾಜ್ಯಗಳು, ವರ್ಗಗಳು ಮತ್ತು ಜಾತಿಗಳಿಗೆ ಪ್ರಾತಿನಿಧ್ಯ ನೀಡಲಾಗಿದೆ. ಆದರೆ, ದೇಶದ ಸುಮಾರು 200 ಮಿಲಿಯನ್ ಜನಸಂಖ್ಯೆಯಿರುವ ಮುಸ್ಲಿಂ ಸಮುದಾಯದಲ್ಲಿ ಒಂದೇ ಒಂದು ಸಚಿವ ಸ್ಥಾನ ನೀಡಲಾಗಿಲ್ಲ.
ಕಳೆದ ಬಾರಿಯ ಸರ್ಕಾರದಲ್ಲಿ ಬಿಜೆಪಿಯ ಮುಖ್ತಾರ್ ಅಬ್ಬಾಸ್ ನಖ್ವಿ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಮೂರು ವರ್ಷಗಳ ನಂತರ ರಾಜ್ಯಸಭೆಗೆ ಮರು ಆಯ್ಕೆಯಾಗದ ಕಾರಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಮುಸ್ಲಿಂ ಸಚಿವರು ಇರಲಿಲ್ಲ.
ಸಾರ್ವತ್ರಿಕ ಚುನಾವಣೆಯ ನಂತರ ಕೇಂದ್ರ ಸಂಪುಟದಲ್ಲಿ ಕನಿಷ್ಠ ಒಬ್ಬ ಮುಸ್ಲಿಂ ಸಂಸದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ಕೇಂದ್ರದಲ್ಲಿ ಮುಸ್ಲಿಂ ಸಮುದಾಯ ಸಂಪೂರ್ಣ ಪ್ರಾತಿನಿಧ್ಯದಿಂದ ವಂಚಿತವಾಗಿದೆ.
ಲೋಕಸಭೆಯಲ್ಲಿಈ ಬಾರಿ 24 ಮುಸ್ಲಿಂ ಸಂಸದರು ಇದ್ದಾರೆ. 21 ಮಂದಿ ಸಂಸದರು ಇಂಡಿಯಾ ಮೈತ್ರಿಕೂಟದದಿಂದ ಆಯ್ಕೆಯಾಗಿದ್ದಾರೆ. ಅಲ್ಲದೆ, ಐಎಂಐಎಂ ನಿಂದ ಆಯ್ಕೆಯಾದ ಅಸದುದ್ದೀನ್‌ ಉವೈಸಿ, ಜಮ್ಮು ಕಾಶ್ಮೀರದ ಸ್ವತಂತ್ರ ಅಭ್ಯರ್ಥಿಗಳಾಗಿ ಅಬ್ದುಲ್‌ ರಶೀದ್‌ ಶೇಖ್‌ ಹಾಗೂ ಮುಹಮ್ಮದ್‌ ಹನೀಫಾ ಆಯ್ಕೆಯಾಗಿದ್ದಾರೆ.
2014 ರಲ್ಲಿ, ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ, ಆಗಿನ ರಾಜ್ಯಸಭಾ ಸಂಸದ ನಜ್ಮಾ ಹೆಪ್ತುಲ್ಲಾ ಅವರನ್ನು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರನ್ನಾಗಿ ಮಾಡಲಾಯಿತು.
1999 ರಲ್ಲಿ, ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ಇಬ್ಬರು ಮುಸ್ಲಿಮ ಸಚಿವರನ್ನು ಹೊಂದಿತ್ತು  ಶಾನವಾಜ್ ಹುಸೇನ್ ಮತ್ತು ಉಮರ್ ಅಬ್ದುಲ್ಲಾ. 1998 ರಲ್ಲಿ ವಾಜಪೇಯಿ ನೇತೃತ್ವದ ಸರ್ಕಾರದಲ್ಲಿ ನಖ್ವಿ ರಾಜ್ಯ ಸಚಿವರಾಗಿದ್ದರು. ಆದರೆ ಇದೀಗ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಕೇಂದ್ರ ಸಚಿವ ಸಂಪುಟ ರಚನೆಯಲ್ಲಿ ಯಾವುದೇ ಮುಸ್ಲಿಂ ಸಚಿವರನ್ನು ಆಯ್ಕೆ ಮಾಡಲಾಗಿಲ್ಲ .

Post a comment

No Reviews