
ಬೆಂಗಳೂರು: ಸಿದ್ದರಾಮಯ್ಯ ಬಲಿಷ್ಠ ಸಿಎಂ ಎಂದು ಹೇಳಲಾಗುತ್ತಿತ್ತು. ಆದರೆ ಎರಡು ಹಗರಣಗಳಲ್ಲಿ ಭಾಗಿಯಾದ ನಂತರ ಅವರ ಬಗ್ಗೆ ಇದ್ದ ಅಡಳಿತ ಪಕ್ಷದ ಶಾಸಕರ ವಿಶ್ವಾಸ ಕುಂದಿದೆ.
ಎಲ್ಲೋ ಒಂದು ಕಡೆ ಸಿದ್ದರಾಮಯ್ಯನವರ ನಿದ್ದೆಗೆಡಿಸಿದೆ. ಹೀಗಾಗಿಯೇ ಅವರು ಹೈಕಮಾಂಡ್ ಆಶ್ರಯ ಪಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ಮೇಲೆ ಎಷ್ಟೇ ಕೇಸ್ ಹಾಕಿದರೂ ಸರಿಯೇ. ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ..' ಇದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ರಾಜ್ಯ ಸರ್ಕಾರಕ್ಕೆ ನೀಡಿರುವ ಸ್ಪಷ್ಟ ಸಂದೇಶ.
ಮುಡಾ ಹಗರಣ, ವಾಲ್ಮೀಕಿ ನಿಗಮದ ಅಕ್ರಮ ಸೇರಿ ವಿವಿಧ ವಿಚಾರಗಳನ್ನು ಮುಂದಿಟ್ಟುಕೊಂಡು ದೋಸ್ತಿ ಪಕ್ಷಗಳಾದ ಬಿಜೆಪಿ, ಜೆಡಿಎಸ್ ಬೆಂಗಳೂರಿನಿಂದ ಮೈಸೂರಿಗೆ ಹಮ್ಮಿಕೊಂಡಿರುವ ಪಾದಯಾತ್ರೆ ನಡುವೆಯೇ ವಿಜಯೇಂದ್ರ ವಿಜಯವಾಣಿಗೆ ಸಂದರ್ಶನ ನೀಡಿದ್ದಾರೆ. ನಾವು ಬಹಿರಂಗ ಸವಾಲು ಸ್ವೀಕರಿಸಿದ್ದೇವೆ, ನಮ್ಮ ಮೇಲೆ 20-30 ಕೇಸ್ ಹಾಕುತ್ತೀರೋ ಹಾಕಿ. ನಿಮ್ಮ ಈ ಭಾಷೆ ಬೆದರಿಕೆ ತಂತ್ರದಿಂದ ವಿರೋಧ ಪಕ್ಷಗಳ ಧ್ವನಿ ಅಡಗಿಸಲು ಸಾಧ್ಯವಿಲ್ಲ. ನಮ್ಮನ್ನು ತಡೆಯುವ ಶಕ್ತಿ ರಾಜ್ಯ ಸರ್ಕಾರಕ್ಕಿಲ್ಲ ಎಂದು ಗುಡುಗಿದರು.
Poll (Public Option)

Post a comment
Log in to write reviews