
ತಿರುಮಲ: ತಿರುಪತಿ ಲಡ್ಡುವಿನಲ್ಲಿ ಮಾಂಸದ ಕೊಬ್ಬನ್ನ ಬಳಕೆ ಮಾಡಲಾಗಿದೆ ಎನ್ನುವ ಆರೋಪದ ಹಿನ್ನೆಲೆ ನಿನ್ನೆ ಆಂಧ್ರದ ತಿರುಪತಿ ಟಿಟಿಡಿ ದೇವಸ್ಥಾನದಲ್ಲಿ ಸಂಪೂರ್ಣ ಶುದ್ದೀಕರಣ ಮಾಡಲಾಗಿದೆ. ತಿರುಪತಿ ಲಡ್ಡುವಿನಲ್ಲಿ ಮಾಂಸದ ಕೊಬ್ಬು ಬಳಕೆ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ವಿವಾದ ಹಿನ್ನೆಲೆ ಸಧ್ಯ ಕೋಟ್ಯಂತರ ಹಿಂದೂಗಳ ಭಾವನೆಗಳಿಗೆ ಅವಮಾನವಾಗಿದೆ. ನಿನ್ನೆ ತಿರುಪತಿಯಲ್ಲಿ ಶಾಂತಿ ಹೋಮ ಮಾಡಿ ಪಂಚಗವ್ಯ ಸಂಪೋಕ್ಷಣೆ ಮಾಡಲಾಗಿದೆ.
ಅದರಂತೆ ಇಂದು ಬೆಂಗಳೂರು ನಗರದ ಟಿಟಿಡಿ ದೇವಸ್ಥಾನದಲ್ಲೂ ಶುದ್ಧೀಕರಣಕ್ಕೆ ಅಣಿ ಮಾಡಿದ್ದು, ಇಂದು ಬೆಳ್ಳಗ್ಗೆಯಿಂದ ಆರಂಭವಾಗಲಿದೆ. ಇನ್ನು ಇಂದು ಸಂಪೂರ್ಣ ಶುದ್ದೀಕರಣ ಮಾಡಿ ಇದೇ ಶುಕ್ರವಾರದಿಂದ ಭಾನುವಾರದವರೆಗೂ ಪವಿತ್ರೋತ್ಸವ ಮಾಡಲಾಗುತ್ತಿದೆ. ಈ ಪವಿತ್ರತ್ರೋತ್ಸೋವಕ್ಕೆ ತಿರುಪತಿಯಿಂದಲೇ ಅರ್ಚಕರುಗಳು ಬರಲಿದ್ದು, ಟಿಟಿಡಿ ದೇವಸ್ಥಾನವನ್ನ ಸಂಪೂರ್ಣವಾಗಿ ಶುದ್ದೀಕರಸಿ, ವಿಶೇಷ ಪೂಜೆಗಳು ನೆರೆವೇರಿಸಲಾಗುತ್ತಿದೆ. ಇನ್ನು ಈ ಪವಿತ್ರೋತ್ಸವನ್ನು ಪ್ರತಿವರ್ಷ ಶ್ರಾವಣ ಶನಿವಾರದ ಸಂದರ್ಭದಲ್ಲಿ ಮಾಡಲಾಗುತ್ತಿತ್ತು. ಆದರೆ ಈಗ ಲಡ್ಡು ವಿವಾದ ಕಂಡುಬಂದ ಹಿನ್ನೆಲೆ ಶುದ್ದಿಕಾರ್ಯಕ್ಕೆ ಅಣಿ ಮಾಡಲಾಗಿದೆ.
Poll (Public Option)

Post a comment
Log in to write reviews