
ಬೆಂಗಳೂರು : ಮಹಿಳಾ ಪಿಜಿಗಳಿಗೆ ಕಟ್ಟುನಿಟ್ಟಿನ ರೂಲ್ಸ್ ಜಾರಿ ಮಾಡಲು ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆ ನಿರ್ಧರಿಸಿದೆ.
ಕೆಲ ದಿನಗಳ ಹಿಂದೆ ಕೋರಮಂಗಲದಲ್ಲಿರುವ ಮಹಿಳಾ ಪಿಜಿಗೆ ವ್ಯಕ್ತಿಯೊಬ್ಬ ನುಗ್ಗಿ ಯುವತಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಈ ನಿರ್ಧಾರಕ್ಕೆ ಬರಲಾಗಿದೆ. ಹೊಸ ರೂಲ್ಸ್ ಪ್ರಕಾರ ನಗರದಲ್ಲಿರುವ ಪಿಜಿಗಳು ಇನ್ನು ಮುಂದೆ ಕಡ್ಡಾಯವಾಗಿ ಪಾಲಿಕೆ ಪರವಾನಿಗಿಯನ್ನು ಪಡೆದುಕೊಂಡಿರಬೇಕು. ಮತ್ತು ಪಿಜಿಗೆ ಬರುವ ಎಲ್ಲಾ ವ್ಯಕ್ತಿಗಳ ಗುರುತಿನ ಚೀಟಿ ಹಾಗು ಇತ್ತೀಚಿನ ಭಾವಚಿತ್ರಗಳನ್ನ ಪಡೆಯಬೇಕು. ರಕ್ತ ಸಂಬಂಧಿಕರು ಹಾಗೂ ಸ್ನೇಹಿತರ ವಿವರಗಳು ಹಾಗೂ ಮೊಬೈಲ್ ಸಂಖ್ಯೆ ಪಡೆದುಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ.
ಪಿಜಿಯಲ್ಲಿ ಕೆಲಸ ಮಾಡುವ ಅಡುಗೆ ಭಟ್ಟ, ಸೆಕ್ಯೂರಿಟಿ ಗಾರ್ಡ್ ಹಾಗೂ ಇನ್ನಿತರೇ ವ್ಯಕ್ತಿಗಳ ಪೂರ್ವಾಪರಗಳ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು. ವಿದೇಶಿ ಪ್ರಜೆಗಳು ಪಿ.ಜಿ ಯಲ್ಲಿ ನೆಲಿಸಿದ್ದಲ್ಲಿ, ಮಾಹಿತಿಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ನೀಡುವುದು. ಪಿಜಿಯಲ್ಲಿ ವಾಸಕ್ಕೆ ಪ್ರವೇಶ ಪಡೆದಿರುವವರನ್ನು ಹೊರತು ಪಡಿಸಿ ಇತರೇ ಯಾರಿಗೂ ವಾಸ್ತವ್ಯಕ್ಕೆ ಅವಕಾಶ ನೀಡಲೇಬಾರದು.
ಸರ್ವೋಚ್ಚ ನ್ಯಾಯಾಲಯದ ಆದೇಶದ ಅನುಸಾರ ರಾತ್ರಿ 10-00 ಗಂಟೆಯಿಂದ ಬೆಳಿಗ್ಗೆ 6-00 ಗಂಟೆಯವರೆಗೆ ಯಾವುದೇ ಧ್ವನಿವರ್ದಕಗಳು ನಿಷೇಧಿಸಬೇಕು. ಆಹಾರ ಗುಣಮಟ್ಟದ ಬಗ್ಗೆ ಪಿಜಿ ಮಾಲೀಕರು ನಿಗಾ ವಹಿಸಬೇಕು. ತಿಂಗಳಲ್ಲಿ ಒಂದು ದಿನ. ಸ್ಥಳೀಯ ಪೊಲೀಸರು ಪಿಜಿಯನ್ನೂ ಪರಿಶೀಲನೆ ನಡೆಸಬೇಕು.. ಒಂದು ವೇಳೆ ಸುರಕ್ಷತಾ ಕ್ರಮ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಅಹಿತಕರ ಘಟನೆ ಸಂಭವಿಸಿದರೆ ಸಂಬಂಧಪಟ್ಟ ಪಿ.ಜಿ. ಮಾಲೀಕರು ಅಥವಾ ಅದರ ವ್ಯವಸ್ಥಾಪಕರ ವಿರುದ್ಧ ಪೊಲೀಸರಿಗೆ ಕ್ರಮ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.
Poll (Public Option)

Post a comment
Log in to write reviews