
ಹಾಸನ: ವರ್ಷಕ್ಕೆ ಒಂದು ಬಾರಿ ಮಾತ್ರ ದರ್ಶನ ನೀಡುವ ಇತಿಹಾಸ ಪ್ರಸಿದ್ಧ ಹಾಸನಾಂಬೆ ದರ್ಶನಕ್ಕೆ ಭರ್ಜರಿ ತಯಾರಿ ಆರಂಭಗೊಂಡಿವೆ. ಈ ಬಾರಿ ಹಾಸನಾಂಬೆ ದೇವಿಯ ಮಹೋತ್ಸವವನ್ನು ವಿಜೃಂಭಣೆಯಿಂದ ನಡೆಸಲು ಪ್ಲ್ಯಾನ್ ಮಾಡಲಾಗಿದೆ. ಈ ಬಾರೀ ಹಾಸನಾಂಬೆ ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ಗೊಂದಲ ಹಾಗೂ ತೊಂದರೆಯಾಗದಂತೆ ಹಾಸನಾಂಬಾ ಆ್ಯಪ್ನ್ನು ಡೆವಲಪ್ ಮಾಡಲಾಗಿದೆ. ಈ ಆ್ಯಪ್ನಲ್ಲಿ ಭಕ್ತರಿಗೆ ಬೇಕಾದ ಮಾಹಿತಿ ಒದಗಿಸಲಾಗಿದೆ. ಇನ್ನುಳಿದಂತೆ ನೀರು, ನೆರಳು, ಮ್ಯಾಟ್ ಸೇರಿ ಇನ್ನಿತರೆ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ಅಕ್ಟೋಬರ್ 24ರಿಂದ ನವೆಂಬರ್ 3ರವರೆಗೆ ಒಟ್ಟು 11 ದಿನಗಳ ಕಾಲ ದೇಗುಲದ ಬಾಗಿಲು ತೆರೆಯಲಿದೆ. ದರ್ಶನಕ್ಕೆ ಬರುವ ಭಕ್ತರಿಗೆ ನೀಡುತ್ತಿದ್ದ ಲಡ್ಡು ವಿತರಣೆಯಲ್ಲಿ ಈ ಬಾರಿ ದೊಡ್ಡ ಮಾರ್ಪಾಡು ಮಾಡಲಾಗಿದೆ.
Poll (Public Option)

Post a comment
Log in to write reviews