
ಹುಬ್ಬಳ್ಳಿ: ನಮ್ಮ ಸಮಾಜದ ವ್ಯಕ್ತಿಯ ಕೊಲೆಯಾಗಿದೆ. ಅವನನ್ನು ನೋಡಲು ಹೋಗುತ್ತಿದ್ದರೆ ಪೊಲೀಸರು ತಡೆಯುತ್ತಿದ್ದಾರೆ. ಪದೇ ಪದೇ ಈ ರೀತಿ ತೊಂದರೆ ಕೊಡುತ್ತಿದ್ದರೆ ನಾನು ವಿಷ ಸೇವಿಸುತ್ತೇನೆ ಎಂದು ಮೃತ ನೇಹಾ ಹಿರೇಮಠ ತಂದೆ, ಪಾಲಿಕೆ ಸದಸ್ಯ ನಿರಂಜನ್ ಹಿರೇಮಠ ಹೇಳಿದ್ದಾರೆ.
ಇಲ್ಲಿನ ಲೋಹಿಯಾ ನಗರದಲ್ಲಿ ಶನಿವಾರ ರಾತ್ರಿ ಕೊಲೆಗೀಡಾಗಿದ್ದ ಆಟೋ ಚಾಲಕ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಪುತ್ರ ಆಕಾಶ ಮಠಪತಿ ಅವರ ಮರಣೋತ್ತರ ಪರೀಕ್ಷೆ ಭಾನುವಾರ ನಡೆಯಿತು. ಈ ವೇಳೆ ಕಿಮ್ಸ್ ಶವಾಗಾರಕ್ಕೆ ನಿರಂಜನ ಹಿರೇಮಠ ತೆರಳುತ್ತಿದ್ದ ವೇಳೆ ಅವರನ್ನು ಪೊಲೀಸರು ತಡೆದು, ನೀವು ಶವಾಗಾರಕ್ಕೆ ಹೋಗಬೇಡಿ ಎಂದರು. ಈ ವೇಳೆ ನಾನು ಹೋಗುತ್ತೇನೆ ಎಂದು ನಿರಂಜನ್, ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ನನ್ನ ಮೇಲೆ ಒತ್ತಡ ಹಾಕಿ ಪೊಲೀಸರು ಬಂಧನ ಮಾಡಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Poll (Public Option)

Post a comment
Log in to write reviews