2024-12-24 07:49:18

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಮತದಾನೋತ್ತರ ಸಮೀಕ್ಷೆಯಲ್ಲಿ ಎನ್‌ಡಿಎ ಮೇಲುಗೈ: ಮತ್ತೊಮ್ಮೆ ಮೋದಿ ಪ್ರಧಾನಿ

ಮತದಾನೋತ್ತರ ಸಮೀಕ್ಷೆ ಹೊರಬಿದ್ದಿದ್ದು ಬಿಜೆಪಿ ಅತಿ ಹೆಚ್ಚು ಕ್ಷೇತ್ರ ಗೆಲ್ಲುವ ಪಕ್ಷವಾಗಿ ಗುರುತಿಸಿಕೊಂಡಿದೆ. ಇಂಡಿಯ ಒಕ್ಕೂಟಕ್ಕೆ ಸರಳ ಬಹುಮತ ಬರುವುದಿಲ್ಲ ಎಂದು ಬಹುತೇಕ ಸಮೀಕ್ಷೆಗಳು ಹೇಳಿದ್ದು, ಕಾಂಗ್ರೆಸ್‌ ಪಕ್ಷ ವೈಯಕ್ತಿಕವಾಗಿ ಒಂದಷ್ಟು ಚೇತರಿಕೆ ಕಂಡಿದೆ. 
ದೇಶದಾದ್ಯಂತ 7 ಹಂತದ ಚುನಾವಣೆಗಳು ಈಗಾಗಲೇ ಮುಗಿದು ಜೂನ್‌ 4 ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಮುನ್ನ ಕೆಲ ಸಂಸ್ಥೆಗಳು ನಡೆಸಿರುವ ಮತದಾನೋತ್ತರ ಸಮೀಕ್ಷೆ ಹೊರಬಿದ್ದಿದೆ.
ಒಂದೆಡೆ ಗ್ಯಾಂರಟಿ ಯೋಜನೆಯಿಂದ ಕಾಂಗ್ರೆಸ್‌ ಮತದಾರರ ಮನಸ್ಸು ಗೆಲ್ಲಲು ಪ್ರಯತ್ನಿಸಿದ್ದರೆ, ಇತ್ತ ಬಿಜೆಪಿಯು ಸಹ ಮೋದಿ ಕಿ ಗ್ಯಾರಂಟಿ ಮೂಲಕ ಮತದಾರನ ಮನಸ್ಸು ಗೆಲ್ಲಲು ಪ್ರಯತ್ನಿಸಿತ್ತು. ಮತದಾನೋತ್ತರ ಸಮೀಕ್ಷೆ ಪ್ರಕಾರ  ಕಳೆದ 10 ವರ್ಷದಿಂದ ಪ್ರಧಾನಿಯಾಗಿ ದೇಶ ಮುನ್ನಡೆಸುತ್ತಿರುವ  ಮೋದಿ ಮತ್ತೊಮ್ಮೆ ಪ್ರಧಾನಿ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. 
ಜನ ಕಿ ಬಾತ್, ಚಾಣಕ್ಯ, ನ್ಯೂನೇಷನ್‌, ಆಕ್ಸಿಸ್‌ ಇಂಡಿಯಾ ಸೇರಿದಂತೆ ಕೆಲ ಖಾಸಗಿ ವಾಹಿನಿಗಳು ಸಹಭಾಗಿತ್ವದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಎನ್‌ಡಿಎ ಮೈತ್ರಿ ಕೂಟಕ್ಕೆ 350 ರಿಂದ 370 ಸ್ಥಾನ ದಕ್ಕುವ ಸಂಭವವಿದೆ ಎಂದು ತಿಳಿಸಿವೆ.
ಕಾಂಗ್ರೆಸ್ ನೇತೃತ್ವದ ಇಂಡಿಯ ಮೈತ್ರಿ ಕೂಟಕ್ಕೆ 150 ರಿಂದ 160 ಕ್ಷೇತ್ರ ಗೆಲ್ಲಲಿದೆ ಎಂದಿವೆ. ರಾಜ್ಯದಲ್ಲಿ ಕಳೆದ ಬಾರಿ ಚುನಾವಣೆಯಲ್ಲಿ ರಾಜ್ಯದಲ್ಲಿ  1 ಸ್ಥಾನ ಮಾತ್ರ ಗೆದ್ದುಕೊಂಡಿದ್ದ ಕಾಂಗ್ರೆಸ್‌ ಗೆ  ಈ ಬಾರಿ 8 ರಿಂದ 10 ಸೀಟು ಲಭಿಸುವ ಸಾಧ್ಯತೆ ಇದ್ದು, ಈ ಬಾರಿ ಬಿಜೆಪಿ 18 ರಿಂದ 20 ರಿಂದ ಸ್ಥಾನ ಗೆಲ್ಲಲಿದೆ. ತಮಿಳುನಾಡಿನಲ್ಲಿ ಬಿಜೆಪಿ ಖಾತೆಯ ತೆರೆಯುವ ಸಾಧ್ಯತೆ ಇದೆ ಎಂದು ಮತದಾನೋತ್ತರ ಸಮಿಕ್ಷೆ ತಿಳಿಸಿದೆ.

ಕೆಲವು ಖಾಸಗಿ ವಾಹಿನಿಗಳು ನಡೆಸಿರುವ ಮತದಾನೋತ್ತರ ಸಮೀಕ್ಷೆಯ ಅಂಕಿ ಅಂಶಗಳು ಈ ಕೆಳಗಿನಂತಿವೆ
ಇಂಡಿಯಾ ನ್ಯೂಸ್ – D-Dynamics
ಎನ್ ಡಿಎ- 371
INDIA- 125
ಇತರೆ- 47

ರಿಪಬ್ಲಿಕ್‌ ಭಾರತ್-Matrize
ಎನ್ ಡಿಎ-353-368
INDIA-118-133
ಇತರೆ-43-48

ರಿಪಬ್ಲಿಕ್‌ ಟಿವಿ- P Marq
ಎನ್ ಡಿಎ -359
INDIA-154
ಇತರೆ-30

ಜನ್‌ ಕಿ ಬಾತ್
NDA-362-392
INDIA Bloc-141-161

ಟಿವಿ 5 ಕನ್ನಡ
ಎನ್ ಡಿಎ-359
INDIA-154
ಇತರೆ- 30

ನ್ಯೂಸ್‌ ನೇಷನ್
ಎನ್ ಡಿಎ: 342-378
India: 153-169
ಇತರೆ: 21-23
 
ಇನ್ನೂ ಕರ್ನಾಟಕದಲ್ಲಿ ಬಿಜೆಪಿ  ಮತ್ತು ಕಾಂಗ್ರೆಸ್‌ ಪಕ್ಷಗಳು ಎಷ್ಟು ಸ್ಥಾನ ಗೆಲ್ಲಬಹುದು ಎಂಬುದರ ಮತದಾನೋತ್ತರ ಸಮೀಕ್ಷೆ ನೋಡುವುದಾದರೆ.
ಆಕ್ಸಿಸ್ ಮೈ ಇಂಡಿಯಾ 
ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ನಲ್ಲಿ ಕರ್ನಾಟಕದಲ್ಲಿ ಬಿಜೆಪಿ 20-22 ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ. ಜೆಡಿಎಸ್ ಮೂರು ಸ್ಥಾನ ಗೆಲ್ಲುವ ಸಾಧ್ಯತೆ ಇರುವುದಾಗಿ ಹೇಳಿದೆ. ನೆರೆಯ ಕೇರಳದಲ್ಲಿ ಬಿಜೆಪಿ 2-3 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಕಾಂಗ್ರೆಸ್ 13-14 ಸ್ಥಾನ, ಆಡಳಿತಾರೂಢ ಎಲ್‌ಡಿಎಫ್ ಕೇವಲ 1 ಸ್ಥಾನ ಗೆಲ್ಲುವ ನಿರೀಕ್ಷೆಯಿದೆ ಎಂದು ಹೇಳಿದೆ.

ಸಿ ಎನ್‌ ಎನ್
ಬಿಜೆಪಿ: 23-26
ಕಾಂಗ್ರೆಸ್: 3-7
ಜೆಡಿಎಸ್: 00

ಇಂಡಿಯಾ ಟಿವಿ
ಬಿಜೆಪಿ: 18-22
ಜೆಡಿಎಸ್: 1-3
ಕಾಂಗ್ರೆಸ್: 4-8

ಇಂಡಿಯಾ ಟುಡೇ
ಬಿಜೆಪಿ: 20-22
ಜೆಡಿಎಸ್- 2-3
ಕಾಂಗ್ರೆಸ್: 3-5
ಬಹುತೇಕ ಎಲ್ಲಾ ಸಮೀಕ್ಷೆಗಳಲ್ಲಿ ಎನ್ ಡಿಎ ಮೈತ್ರಿಕೂಟ 350ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುವ ಭವಿಷ್ಯ ನುಡಿದಿವೆ.
 

Post a comment

No Reviews