
ನವದೆಹಲಿ: ನರೇಂದ್ರ ಮೋದಿ ಇಂದು ಸಂಜೆ 7:30ಕ್ಕೆ ದೇಶದ 18 ಪ್ರಧಾನಿಯಾಗಿ ರಾಷ್ಟ್ರ ಪತಿ ಭವನದ ಮುಂದೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಎರಡು ಬಾರಿ ಎನ್‌ಡಿಎ ಅವಧಿಯಲ್ಲಿ ಪ್ರಧಾನಿಯಾಗಿದ್ದ ಮೋದಿ, ಇದೇ ಮೊದಲ ಬಾರಿಗೆ ಮೈತ್ರಿ ಸರ್ಕಾರದಲ್ಲಿಆಡಳಿತ ನಡೆಸಲಿದ್ದಾರೆ. ಈ ಹಿಂದೆ 2014 ಹಾಗೂ 2019 ರಲ್ಲಿ ಕೇಂದ್ರದಲ್ಲಿ 2 ಭಾರಿ ಬಿಜೆಪಿ ಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬಂದಿತ್ತು. ಅದರೊಂದಿಗೆ ಪೂರ್ಣ ಬಹುಮತದೂಂದಿಗೆ ನರೇಂದ್ರ ಮೋದಿ ಆಡಳಿತ ನಡೆಸಿದ್ದರು. ಈ ಬಾರಿಯೂ ನರೇಂದ್ರ ಮೋದಿ ಅದೇ ನಿರೀಕ್ಷೆಯಲ್ಲಿದ್ದರೂ ಬಿಜೆಪಿ 400 ಕ್ಷೇತ್ರ ಗೆಲ್ಲುತ್ತದೆ ಎಂಬ ಭರವಸೆ ಸಹ ಹೊಂದಿದ್ದರೂ ಆದರೆ ಅದು ಹುಸಿಯಾಗಿ, ಮೈತ್ರಿಕೂಟದ ಸರ್ಕಾರ ಬರಲಿದೆ. ಬಿಜೆಪಿ 240 ಕ್ಷೇತ್ರ ಗೆದ್ದಿರುವುದರಿಂದ ಸಮ್ಮಿಶ್ರ ಸರ್ಕಾರ ರಚಿಸಬೇಕಾದ ಅನಿವಾರ್ಯ ಉಂಟಾಗಿದೆ.
Poll (Public Option)

Post a comment
Log in to write reviews