
ಕೋಲಾರ : ಕೇರಳದ ವಯನಾಡಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಸ್ಥಳೀಯರಗೆ ದೇಣಿಗೆ ನೀಡುವ ಮೂಲಕ ನಗರದ ಪಾಲಸಂದ್ರ ಲೇಔಟ್‌ನಲ್ಲಿರುವ ನಳಂದ ವಿದ್ಯಾನಿಕೇತನ ಶಾಲೆಯಿಂದ ಕಿರು ಕಾಣಿಕೆ ನೀಡುವ ಮೂಲಕ ಮಾನವೀಯತೆ ಮೆರದಿದ್ದಾರೆ.
ಕೇರಳದ ವಯಾನಾಡಿನಲ್ಲಿ ಜೂನ್ ತಿಂಗಳಲ್ಲಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಅನೇಕ ನಾಗರೀಕರು ತಮ್ಮ ಸರ್ವಸ್ವವನ್ನು ಕಳೆದುಕೊಂಡು ತುಂಬಾ ಸಂಕಷ್ಟಕ್ಕೀಡಾಗಿದ್ದಾರೆ. ಈ ಹಿನ್ನಲೆಯಲ್ಲಿ ಮಾನವೀಯ ದೃಷ್ಟಿಯಿಂದ ನಳಂದ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರು, ಮತ್ತು ಆಡಳಿತ ಮಂಡಳಿಯವರು ಸೇರಿ ಕಿರು ದೇಣಿಗೆಯನ್ನು ಕೇರಳದ ಮುಖ್ಯಮಂತ್ರಿಗಳ ಸಂಕಷ್ಟ ಪರಿಹಾರ ನಿಧಿ ದೇಣಿಗೆ ಮೊತ್ತವಾಗಿ 15810 ರೂಗಳನ್ನು ಸಗ್ರಹಿಸಿದ್ದಾರೆ
ದೇಶದ ಯಾವುದೇ ಪ್ರದೇಶ ಪ್ರಕೃತಿ ವಿಕೋಪಕ್ಕೆ ಗುರಿಯದರೆ ದೇಶದ ಎಲ್ಲಾ ನಾಗರೀಕರು ಮಾನವೀಯತೆ ದೃಷ್ಟಿಯಲ್ಲಿ ಸ್ಪಂದಿಸಬೇಕೆಂಬ ಸಂದೇಶವನ್ನು ನಳಂದ ವಿದ್ಯಾರ್ಥಿಗಳು ಸಾರಿದ್ದಾರೆ.
Poll (Public Option)

Post a comment
Log in to write reviews