2024-11-08 10:43:18

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಭಾರತೀಯ ಸೇನೆಗೆ 'ನಾಗಾಸ್ತ್ರ -1' ಬಲ : ಇದು ಭಾರತದ ಮೊದಲ 'ಸೂಸೈಡ್ ಡ್ರೋನ್'..!

ನವದೆಹಲಿ : ಪಾಕಿಸ್ತಾನದ ಗಡಿಯಲ್ಲಿ ಶತ್ರುಗಳ ವಾಯು ದಾಳಿಗಳನ್ನು ಸಮರ್ಥವಾಗಿ ಎದುರಿಸಲು ಭಾರತೀಯ ಸೇನೆಗೆ ಇದೀಗ 'ನಾಗಾಸ್ತ್ರ -1' ಎಂಬ ಹೆಸರಿನ ಆತ್ಮಹತ್ಯಾ ಡ್ರೋನ್ ಸೇರ್ಪಡೆಗೊಂದಿದ್ದು, ಸೇನೆಯ ಬಲವನ್ನು ಹೆಚ್ಚಿಸಿದೆ. 

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಆತ್ಮನಿರ್ಭರ ಯೋಜನೆಯಡಿ ರಕ್ಷಣಾ ಸಾಮಗ್ರಿಗಳನ್ನು ಸಂಪೂರ್ಣ ಸ್ವದೇಶಿವಾಗಿಯೇ ಉತ್ಪಾದನೆ ಮಾಡುವ ಪ್ರಯತ್ನದಲ್ಲಿರುವ ಭಾರತೀಯ ಸೇನೆಗೆ, ಆತ್ಮಹತ್ಯಾ ಡ್ರೋನ್ ನಾಗಾಸ್ತ್ರ- 1 ಸೇರ್ಪಡೆಯಾಗಿದೆ. ಭಾರತೀಯ ಸೇನೆ ಒಟ್ಟು 480  'ನಾಗಾಸ್ತ್ರ -1' ದ್ರೋನ್‌ ಗಳನ್ನು ಖರೀದಿ ಮಾಡಲಿದೆ ಎಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ. 

ಇನ್ನು 'ನಾಗಾಸ್ತ್ರ -1' ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದು, ತುರ್ತು ಸಂದರ್ಭಗಳಲ್ಲಿ ಕಾರ್ಯಾಚರಣೆ ಕೈಗೊಳ್ಳಲು ಹಾಗೂ ಭಯೋತ್ಪಾದಕರ ನೆಲೆಗಳ ಮೇಲೆ ನಿಖರ ದಾಳಿ ಮಾಡಲು  ಇವು ನೆರವಾಗಲಿವೆ. 'ಮೇಕ್ ಇನ್ ಇಂಡಿಯಾ' ಯೋಜನೆಯಡಿ ನಾಗ್ಪುರದ ಸೋಲಾರ್ ಇಂಡಸ್ಟ್ರೀಸ್ನ 'ಎಕಾನಾಮಿಕ್ಸ್ ಎಕ್ಸ್‌ಪ್ಲೋಸಿವ್ ಲಿಮಿಟೆಡ್' (ಇಇಎಲ್) ಕಂಪನಿಯು ಈ ಡ್ರೋನ್‌ಗಳನ್ನು ತಯಾರಿಸಿ, ಭಾರತೀಯ ಸೇನೆಗೆ ಹಸ್ತಾಂತರಿಸಲಿದೆ. 

'ನಾಗಾಸ್ತ್ರ -1' ಡ್ರೋನ್ಗಳ ನೆರವಿನೊಂದಿಗೆ ಭಾರತೀಯ ಸೇನಾಶಕ್ತಿ ವೃದ್ಧಿಸಿದಂತಾಗಿದೆ. ಪಾಕಿಸ್ತಾನದ ಗಡಿ ಭಾಗದಲ್ಲಿ ಉಗ್ರರ ಚಲನವಲನಗಳ ಮೇಲೆ ಹದ್ದಿನ ಕಣ್ಣಿಡಲು ಇದು ಅನುಕೂಲವಾಗಲಿದೆ. ಈ ಹಿಂದೆ ಈ ಮಾದರಿಯ ಡ್ರೋನ್‌ಗಳನ್ನು ಇಸ್ರೇಲ್‌ ಮತ್ತು ಯುರೋಪಿಯನ್‌ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಇದೀಗ 'ನಾಗಾಸ್ತ್ರ -1' ತಯಾರಿಕೆಯಲ್ಲಿ ಶೇಕಡಾ 75ರಷ್ಟು ದೇಶೀಯ ಉಪಕರಣಗಳನ್ನು ಬಳಸಲಾಗಿದೆ.  ಬೆಂಗಳೂರಿನಲ್ಲಿರುವ ಜೆಡ್ ಮೋಷನ್ ಆಟೋನೊಮಸ್ ಸಿಸ್ಟಮ್ಸ್ ಪ್ರೈವೆಟ್ ಲಿಮಿಟೆಡ್‌ ಕಂಪನಿಯ  ಸಹಯೋಗದೊಂದಿಗೆ ಇದನ್ನು ವಿನ್ಯಾಸಗೊಳಿಸಲಾಗಿದೆ.

'ನಾಗಾಸ್ತ್ರ -1' ವಿಶೇಷತೆಗಳೇನು : 
•    1ಕೆ.ಜಿಯಷ್ಟು ಸ್ಫೋಟಕ ಹೊತ್ತೊಯ್ಯಬಲ್ಲ 'ನಾಗಾಸ್ತ್ರ - 1' ಡ್ರೋನ್ ಆತ್ಮಹತ್ಯಾ ಬಾಂಬರ್‌ನಂತೆಯೂ ಕಾರ್ಯನಿರ್ವಹಿಸುತ್ತದೆ.
•    GPS ನಿರ್ದೇಶಿತ ತಂತ್ರಜ್ಞಾನದ ಮೂಲಕ ದಾಳಿ ನಡೆಸುತ್ತದೆ. 
•    ಕೇವಲ 2 ಮೀಟರ್ ನಿಖರತೆಯಲ್ಲಿ ನಿಗದಿತ ಗುರಿಯ ಮೇಲೆ ದಾಳಿ ಮಾಡುತ್ತದೆ. 
•    ರಾತ್ರಿ ವೇಳೆಯೂ ಸ್ಪಷ್ಟ ಚಿತ್ರಣದ ಕಣ್ಗಾವಲು ವಹಿಸುವ ಸಾಮರ್ಥ್ಯ ಹೊಂದಿದೆ. 
•    ರಿಮೋಟ್ ಕಂಟ್ರೋಲ್ ಮೂಲಕ ಚಲಾಯಿಸಬಹುದು.
•    15 ಕಿ.ಮೀ ದೂರದ ವ್ಯಾಪ್ತಿಯೊಳಗೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ. ನಂತರ ಸ್ವಯಂ ಚಾಲಿತವಾಗಿ ಗರಿಷ್ಠ 30 ಕಿ.ಮೀವರೆಗೂ ಕ್ರಮಿಸಿ ಗುರಿ ತಲುಪಬಲ್ಲದು.
•    ಅರ್ಧ ಗಂಟೆ ಹಾರಾಟ ನಡೆಸುವ ಸಾಮರ್ಥ್ಯದೊಂದಿಗೆ 1 ಕೆ.ಜಿಯಷ್ಟು ಸ್ಫೋಟಕ ಹೊತ್ತೊಯ್ಯಬಲ್ಲದು.
•    ಸುಲಭವಾಗಿ  ಶತ್ರುವಿನ ಕಣ್ಣಿಗೆ ಬೀಳುವುದಿಲ್ಲ.

Post a comment

No Reviews