ಬೆಂಗಳೂರು: ನಾಗಸಂದ್ರ ಟು ಮಾದಾವರ ಮಾರ್ಗದ ನಮ್ಮ ಮೆಟ್ರೋ ಕಾರ್ಯಚರಣೆಗೆಯು ಕೊನೆಗೂ ಸಿದ್ಧವಾಗಿದೆ. ಈ ಮಾರ್ಗದ ನಿವಾಸಿಗಳ ಹಲವು ವರ್ಷಗಳ ಕನಸಾಗಿತ್ತು. ಏಳು ವರ್ಷಗಳಿಂದ ಕಾಮಗಾರಿ ನಡೆಯುತ್ತಲೇ ಇದ್ದು, ಮೆಟ್ರೋ ರೈಲು ಸಂಚಾರ ಶುರುವಾಗಿರಲೇ ಇಲ್ಲ. ಆದರೆ ಇನ್ನೊಂದು ವಾರದಲ್ಲಿ ಕಾರ್ಯರಂಭ ಮಾಡಲಿದೆ ಎನ್ನಲಾಗಿದೆ.
3.14ಕಿಮೀ ಮಾರ್ಗದಲ್ಲಿ ನಾಗಸಂದ್ರದಿಂದ ಮಾದಾವರ ನಡುವೆ ಮೂರು ನಿಲ್ದಾಣಗಳಿದ್ದು, ಮಾದಾವರ, ಮಂಜುನಾಥ ನಗರ, ಚಿಕ್ಕಬಿದರಕಲ್ಲು, ಹಸಿರು ಮಾರ್ಗಕ್ಕೆ ಹೊಸದಾಗಿ ಸೇರ್ಪಡೆಯಾಗಲಿದೆ. ಉದ್ಘಾಟನಾ ಸಮಾರಂಭ ನಡೆಯುವ ನಿರೀಕ್ಷೆ ಇರುವುದರಿಂದ ಒಂದು ವಾರದೊಳಗೆ ನಿಲ್ದಾಣಗಳನ್ನ ಸುಸಜ್ಜಿತಗೊಳಿಸಲಾಗುತ್ತಿದೆ.
ಈ ಮಾರ್ಗ ಪೂರ್ಣಗೊಳ್ಳುವುದರಿಂದ ನೆಲಮಂಗಲ, ಮಾದನಾಯಕನಹಳ್ಳಿ, ಮಾಕಳಿ ನಿವಾಸಿಗಳಿಗೆ, ನಾಗಸಂದ್ರ-ಮಾದಾವರ ಮಾರ್ಗದ ಮೂರು ನಿಲ್ದಾಣಗಳ ಸಮೀಪದ ಅಪಾಟ್ಮೆಂಟ್‌ಗಳ ನಿವಾಸಿಗಳು ಮತ್ತು ಸುತ್ತ ಮುತ್ತಲಿನ ನಿವಾಸಿಗಳಿಗೆ ಸಹಾಯ ಆಗಲಿದ್ದು, ಏಷ್ಯಾದ ಅತಿ ದೊಡ್ಡ ಪ್ರದರ್ಶನ ಆಯೋಜಿಸುವ ಬೆಂಗಳೂರು ಇಂಟರ್‌ನ್ಯಾಷನಲ್ ಎಕ್ಸಿಬಿಷನ್ ಸೆಂಟರ್ ಬಲಭಾಗಕ್ಕೆ ಚಿಕ್ಕ ಬಿದರಕಲ್ಲು ನಿಲ್ದಾಣವಿದೆ.
ಸಿವಿಲ್, ಪೇಂಟಿಂಗ್, ಸ್ಟೇಷನ್ ಕೆಲಸ ಸೇರಿದಂತೆ ಎಲ್ಲವೂ ಮುಗಿದಿದ್ದು, ಈಗಾಗಲೇ ಮೂರು ಮೆಟ್ರೋ ಸ್ಟೇಷನ್ಗಳು ಉದ್ಘಾಟನೆಗೆ ಸಿದ್ದವಾಗಿದೆ.
ಒಟ್ಟಿನಲ್ಲಿ ಈ ಮಾರ್ಗದ ಮೆಟ್ರೋಗೆ ಈಗಾಗಲೇ ರೈಲ್ವೆ ಸುರಕ್ಷತಾ ಆಯುಕ್ತರು ಅನುಮತಿ ನೀಡಿದ್ದಾರೆ. ಆದರೆ, ರಾಜ್ಯ ಸರ್ಕಾರ ಕೇಂದ್ರದ ಅನುಮತಿಗೆ ಪತ್ರ ಬರೆದಿದ್ದು, ಗ್ರೀನ್ ಸಿಗ್ನಲ್ಗಾಗಿ ಕಾಯುತ್ತಿದೆ. ಕೇಂದ್ರ ಸರ್ಕಾರ ಶೀಘ್ರದಲ್ಲೇ ಗ್ರೀನ್ ಸಿಗ್ನಲ್ ಕೊಡುವ ನಿರೀಕ್ಷೆ ಇದ್ದು, ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾಗುವುದು ಖಚಿತವಾಗಿದೆ.
Post a comment
Log in to write reviews