
ಮಂಗಳೂರು: ನಾಡಿನೆಲ್ಲೆಡೆ ಇಂದು ನಾಗರ ಪಂಚಮಿ ಹಬ್ಬದ ಸಂಭ್ರಮ ಮನೆ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ನಾಗರಾಧನೆ ಶೃದ್ಧಾ ಭಕ್ತಿಯಿಂದ ನಡೆಯುತ್ತಿದ್ದು, ಕುಕ್ಕೆ ಸುಬ್ರಹ್ಮಣ್ಯ, ಕುಡುಪು ಕ್ಷೇತ್ರ ಹಾಗೂ ಕುಟುಂಬದ ಮೂಲ ನಾಗಬನಗಳಿಗೆ ತೆರಳಿ ಭಕ್ತರು ತನು ಅರ್ಪಿಸಿದರು.
ನಾಗರಾಧನೆ ಕ್ಷೇತ್ರಗಳಲ್ಲಿ ಮುಂಜಾನೆಯಿಂದಲೇ ಜನರು ತೆರಳಿ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆಯುತ್ತಿದ್ದಾರೆ. ಸಾವಿರಾರು ಭಕ್ತರು ನಾಗ ದೇವರಿಗೆ ಹಾಲಿನ ಅಭಿಷೇಕ, ಸೀಯಾಳ (ಎಳೆನೀರು) ಅಭಿಷೇಕ ಮಾಡಿದರು.
ಕರಾವಳಿಯಲ್ಲಿ ನಾಗರ ಪಂಚಮಿಯಂದು ಎಲ್ಲರೂ ತಮ್ಮ ಪೂರ್ವಜರಿಂದ ಬಂದ ಕುಟುಂಬದ ಮೂಲ ನಾಗಬನಗಳಿಗೆ ತೆರಳಿ ತನು ಅರ್ಪಿಸುವ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಪವಿತ್ರ ದಿನದಂದು ಹಾಲು, ಸೀಯಾಳಗಳನ್ನು ನಾಗದೇವರಿಗೆ ಸಮರ್ಪಿಸುತ್ತಾರೆ. ಪ್ರತಿ ನಾಗಬನದಲ್ಲಿಯೂ ದೇವರಿಗೆ ತನು ಅರ್ಪಿಸಲು ಬರುವ ಭಕ್ತರು ತಂಬಿಲ ಸೇವೆಗಳನ್ನು ನಡೆಸುತ್ತಾರೆ.
Poll (Public Option)

Post a comment
Log in to write reviews