
ಉಡುಪಿ:ನಾಗರಪಂಚಮಿಯ ದಿನವಾದ ಇಂದು ಜೀವಂತ ನಾಗರ ಹಾವಿಗೆ ಪೂಜಿ ಸಲ್ಲಿಸಿದ ಅಚ್ಚರಿ ಘಟನೆ ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿ ನಡೆದಿದೆ. ಉರಗ ರಕ್ಷಕ ಸುಧೀಂದ್ರ ಐತಾಳರು ಎಂಬುವವರು ವರ್ಷಂಪ್ರತಿ ಜೀವಂತ ನಾಗನಿಗೆ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ.
ಗ್ರಾಮದಲ್ಲಿ ಉರಗ ರಕ್ಷಕ ಸುಧೀಂದ್ರ ಐತಅಳರು ನಾಗರಪಂಚಮಿಯ ದಿನವಾದ ಇಂದು ಜೀವಂತ ನಾಗರ ಹಾವಿಗೆ ಪೂಜಿ ಸಲ್ಲಿಸಿದ್ದಾರೆ. ವರ್ಷಂಪ್ರತಿ ಐತಾಳರು ಜೀವಂತ ನಾಗನಿಗೆ ಪೂಜೆ ಸಲ್ಲಿಸಿ ಸುದ್ದಿಯಲ್ಲಿರುತ್ತಾರೆ. ಹಾಗಂತ ಇದು ಇವತ್ತು ನಿನ್ನೆಯಿಂದ ನಡೆದುಕೊಂಡು ಬಂದ ಪದ್ದತಿಯಲ್ಲ. ಐತಾಳರು ಕಳೆದ 40 ವರ್ಷಗಳಿಂದಲೂ ಉರಗ ರಕ್ಷಣೆಯ ಕಾರ್ಯ ಮಾಡುತ್ತಿದ್ದಾರೆ. ಹಾಗೆ ನೋಡಿದರೆ ಪ್ರತಿನಿತ್ಯ ಅವರು ಜೀವಂತ ಹಾವುಗಳಿಗೆ ಪೂಜೆ ಮಾಡುತ್ತಾ ಬಂದಿದ್ದಾರೆ. ಗಾಯಗೊಂಡ ಹಾವು, ಆಶ್ರಯ ಇಲ್ಲದ ಹಾವು, ಬೇರ್ಪಟ್ಟ ಹಾವಿನ ಮರಿಗಳು, ಅಪಘಾತದಲ್ಲಿ ಗಾಯಗೊಂಡ ಹಾವು. ಹೀಗೆ ಎಲ್ಲೇ ಹಾವುಗಳು ಕಂಡರೂ ಅವರು ತಮ್ಮ ಮನೆಗೆ ತಂದು ಅದರ ಆರೈಕೆ ಮಾಡುತ್ತಾರೆ. ಕಳೆದ 40 ವರ್ಷಗಳಿಂದ ಅವರು ಇದೇ ಕಾಯಕ ಮಾಡುತ್ತಿದ್ದಾರೆ. ಹಾಗಾಗಿ ಅವರ ಮನೆಯಲ್ಲಿ ಹಾವಿಗೆ ನಿತ್ಯವೂ ಪೂಜೆ ನಡೆಯುತ್ತಿರುತ್ತದೆ. ಇವತ್ತು ನಾಗರಪಂಚಮಿಯ ಪ್ರಯುಕ್ತ ವಿಶೇಷ ರೀತಿಯಲ್ಲಿ ನಾಗರಾಧನೆ ಮಾಡಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
Poll (Public Option)

Post a comment
Log in to write reviews