ನಿನ್ನ ಧಮ್ಕಿಗೆ ಮುಸ್ಲಿಮರು ಹೆದರಲ್ಲ: ಹೆಚ್‌ಡಿಕೆ ವಿರುದ್ಧ ಡಿಕೆ ಶಿವಕುಮಾರ್ ಕಿಡಿ

ಮಂಡ್ಯ: ಮುಸ್ಲಿಮರು ಇಲ್ಲ ಅಂದಿದ್ರೆ ನೀವು ಎಂಎಲ್‌ಎ ಆಗ್ತಿರಲಿಲ್ಲ, ನಿಮ್ಮ ತಂದೆ ಸಿಎಂ ಆಗ್ತಿರಲಿಲ್ಲ. ಈಗ ಮುಸ್ಲಿಮರಿಗೆ ವೋಟ್ ಹಾಕಿಲ್ಲ ಅಂತ ಧಮ್ಕಿ ಹಾಕ್ತಾರೆ. ನೀನು ಬಿಜೆಪಿಗೆ ಹೋಗಿ ಮಂತ್ರಿಯಾದ ತಕ್ಷಣ ಯಾರನ್ನೂ ಸಂವಿಧಾನದಿಂದ ಓಡಿಸಲು ಆಗಲ್ಲ. ನಿನ್ನ ಧಮ್ಕಿಗೆ ಮುಸಲ್ಮಾನರು ಹೆದರಲ್ಲ ಎಂದು ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಡಿಸಿಎಂ ಡಿ.ಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮದ್ದೂರಿನಲ್ಲಿ ಮಾತನಾಡಿದ ಅವರು, 10 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ತೆಗೆಯುವುದಾಗಿ ಹೆಚ್‌ಡಿಕೆ ಹೇಳುತ್ತಾರೆ. ಬ್ರಿಟಿಷರ ಕೈಯಲ್ಲೇ ಕಾಂಗ್ರೆಸ್ ಮುಗಿಸಲು ಆಗಲಿಲ್ಲ. ಕುಮಾರಸ್ವಾಮಿ ಕೈಯಲ್ಲಿ ಆಗುತ್ತಾ? ನಮ್ಮದು 10 ತಿಂಗಳ ಸರ್ಕಾರ ಅಲ್ಲ ಕುಮಾರಣ್ಣ, 10 ವರ್ಷದ ಸರ್ಕಾರ. ನಿಮ್ಮ ಹಣೆಬರಹದಲ್ಲಿ ಕಾಂಗ್ರೆಸ್ ಸರ್ಕಾರದ ಒಂದೇ ಒಂದು ಕಾರ್ಯಕ್ರಮ ನಿಲ್ಲಿಸಲು ಆಗಲ್ಲ ಎಂದು ಕಿಡಿ ಕಾರಿದರು.
ಮುಸ್ಲಿಮರು ಇಲ್ಲ ಅಂದಿದ್ರೆ ನೀವು ಎಂಎಲ್‌ಎ ಆಗ್ತಿರಲಿಲ್ಲ, ನಿಮ್ಮ ತಂದೆ ಸಿಎಂ ಆಗ್ತಿರಲಿಲ್ಲ. ಈಗ ಮುಸ್ಲಿಮರಿಗೆ ವೋಟ್ ಹಾಕಿಲ್ಲ ಅಂತ ಧಮ್ಕಿ ಹಾಕ್ತಾರೆ. ನಿಮ್ಮ ತಂದೆ ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೀನಿ ಎಂದಿದ್ದು ನೆನೆಸಿಕೊಳ್ಳಿ ಎಂದು ತೀವ್ರ ವಾಗ್ದಾಳಿ ನಡೆಸಿದರು.
Poll (Public Option)

Post a comment
Log in to write reviews