2024-12-24 06:06:13

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಕೊಲೆ ಆರೋಪಿ ದರ್ಶನ್​​ಗೆ ಕೊನೆಗೂ ಸಿಕ್ತು ರಿಲೀಫ್; ಫ್ಯಾನ್ಸ್​ಗೆ ಗುಡ್ ನ್ಯೂಸ್

ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲು ಸೇರಿ ನಾಲ್ಕು ತಿಂಗಳುಗಳು ಕಳೆದಿವೆ. ಹೊರ ಬರಲು ಅವರು ಸಾಕಷ್ಟು ಪ್ರಯತ್ನ ಮಾಡುತ್ತಿದ್ದರಾದರೂ ಅದು ಸಾಧ್ಯವಾಗುತ್ತಿಲ್ಲ. ದರ್ಶನ್ ಅವರ ಜಾಮೀನು ಅರ್ಜಿ ಈಗಾಗಲೇ ಕೆಳ ಹಂತದ ಕೋರ್ಟ್​ನಲ್ಲಿ ರಿಜೆಕ್ಟ್ ಆಗಿದೆ. ಈ ಮಧ್ಯೆ ದರ್ಶನ್​ಗೆ ಕೊಂಚ ರಿಲೀಫ್ ಆಗುವಂತಹ ಬೆಳವಣಿಗೆ ನಡೆದಿದೆ. ತೀವ್ರ ಬೆನ್ನುನೋವಿನಿಂದ ಬಳಲುತ್ತಿದ್ದ ದರ್ಶನ್​ಗೆ ಫಿಜಿಯೋ ಥೆರಪಿ ಚಿಕಿತ್ಸೆ ಕೊಡಿಸಲಾಗಿದೆ.

ಶುಕ್ರವಾರ (ಅಕ್ಟೋಬರ್ 19) ಸಂಜೆಯಿಂದಲೇ ವಿಮ್ಸ್ ಆಸ್ಪತ್ರೆ ವೈದ್ಯರಿಂದ ಫಿಜಿಯೋಥೆರೆಪಿ ಚಿಕಿತ್ಸೆ ಕೊಡಲಾಗುತ್ತಿದೆ. ಜೈಲಿನ ಹೈ ಸೆಕ್ಯೂರಿಟಿ ಸೆಲ್​ನಲ್ಲೇ ವಿಮ್ಸ್ ವೈದ್ಯರು ಒಂದು ಗಂಟೆ ಫಿಜಿಯೋಥೆರೆಪಿ ಮಾಡಿದ್ದಾರೆ. ಇದರಿಂದ ದರ್ಶನ್ ಕೊಂಚ ರಿಲೀಫ್ ಆಗಿದ್ದಾರೆ. ದರ್ಶನ್​ ಬೆನ್ನಿನ ಭಾಗದಲ್ಲಿ ಊತ ಕಾಣಿಸಿಕೊಂಡಿದೆ. ಈಗ ಅವರಿಗೆ ಚಿಕಿತ್ಸೆ ಸಿಗುತ್ತಿರುವ ವಿಚಾರ ಫ್ಯಾನ್ಸ್ ಖುಷಿಗೆ ಕಾರಣ ಆಗಿದೆ.

ನ್ಯೂರೋ ಹಾಗೂ ಆರ್ಥೋಪಿಡಿಷನ್ ವೈದ್ಯರು ದರ್ಶನ್ ಅವರ ದೇಹವನ್ನು ಸ್ಕ್ಯಾನಿಂಗ್ ಮಾಡಿದ್ದರು. ಈ ವೇಳೆ ಸರ್ಜರಿ ಹಾಗೂ ಫಿಜಿಯೋಥೆರಪಿ ಮಾಡಿಸುವಂತೆ ಸಲಹೆ ನೀಡಿದ್ದರು. ಸದ್ಯ ಸರ್ಜರಿಯನ್ನು ಅವರು ಬೆಂಗಳೂರಿಗೆ ಹೋಗಿ ಮಾಡಿಸುವುದಾಗಿ ಹೇಳುತ್ತಿದ್ದಾರೆ. ಹೀಗಾಗಿ, ಫಿಜಿಯೋಥೆರೆಪಿ ಆರಂಭಿಸಲಾಗಿದೆ.

ದರ್ಶನ್​ಗೆ ಬುಧವಾರವೇ ಫಿಜಿಯೋಥೆರೆಪಿ ಆರಂಭ ಆಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಫಿಜಿಯೋಥೆರಪಿ ಮಾಡಿಸಲು ಸಾಧ್ಯವಾಗಿರಲಿಲ್ಲ. ಈಗ ಅವರು ಫಿಜಿಯೋಥೆರೆಪಿ ಮಾಡಿಸಿದ್ದಾರೆ. ವೈದ್ಯರ ಸೂಚನೆ ಮೇರೆಗೆ ಮೆಡಿಕಲ್ ಬೆಡ್, ದಿಂಬು ಹಾಗೂ ಚೇರ್​ಗಳನ್ನು ಕೊಡಲಾಗಿದೆ.

ದರ್ಶನ್ ಅವರು ಜಾಮೀನು ನೀಡಬೇಕು ಎಂದು ಕೆಳ ಹಂತದ ಕೋರ್ಟ್​ನಲ್ಲಿ ಕೋರಿದ್ದರು. ಆದರೆ, ಇದಕ್ಕೆ ಕೋರ್ಟ್ ಒಪ್ಪಿಗೆ ಕೊಟ್ಟಿಲ್ಲ. ದರ್ಶನ್ ಅವರ ಜಾಮೀನು ಅರ್ಜಿ ವಜಾ ಆಗಿದೆ. ಈ ಬೆನ್ನಲ್ಲೇ ದರ್ಶನ್ ಪರ ವಕೀಲರು ಹೈಕೋರ್ಟ್​ನಲ್ಲಿ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದಾರೆ.

Post a comment

No Reviews