
ಬಿಜೆಪಿ ಶಾಸಕ ಮುನಿರತ್ನ ಕರ್ಮಕಾಂಡ ಬಗೆದಷ್ಟೂ ಬಯಲಾಗುತ್ತಿದೆ. ಇದೀಗ ಅತ್ಯಾಚಾರ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗಿದ್ದ ದೂರುದಾರ ಮಹಿಳೆ ರಾಜಕರಣಿಗಳು, ಅಧಿಕಾರಿಗಳು ಅಶ್ಲೀಲ ವಿಡಿಯೋ ಹಾಗೂ ಫೋಟೋಸ್ ಗಳನ್ನ ಅಧಿಕಾರಿಗಳಿಗೆ ಪುರಾವೆಯಾಗಿ ನೀಡಿದ್ದಾರೆ. ಮುನಿರತ್ನ ತನ್ನ ಮೇಲೆ ಅತ್ಯಾಚಾರ ಮಾಡಿದ್ದಲ್ಲದೇ, ಕೆಲ ರಾಜಕಾರಣಿಗಳು ಹಾಗೂ ಅಧಿಕಾರಿಗಳನ್ನು ಹನಿಟ್ರ್ಯಾಪ್ ಮಾಡಲು ತಮ್ಮನ್ನ ಬಳಸಿಕೊಂಡಿದ್ದರು . ತನಗೆ ಹಾಗೂ ತನ್ನ ಕುಟುಂಬಕ್ಕೆ ಮುನಿರತ್ನ ಜೀವ ಬೆದರಿಕೆವೊಡ್ಡಿದ್ದರು. ಅನಿವಾರ್ಯವಾಗಿ ಮುನಿರತ್ನ ಹೇಳಿದ ಹಾಗೆ ಕೇಳಿದೆ ಎಂದು ಸಂತ್ರಸ್ತ ಮಹಿಳೆ ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಸಂತ್ರಸ್ತ ಮಹಿಳೆಯ ಮೊಬೈಲ್ ಫೋನ್ ಜಪ್ತಿಯಾಗಿದ್ದು, ಸಂತ್ರಸ್ತ ಮಹಿಳೆ ನೀಡಿರೋ ಸಾಕ್ಷಿಗಳಿಂದ ಮುನಿರತ್ನಗೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
Poll (Public Option)

Post a comment
Log in to write reviews