
ಮುಂಬೈ: ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಮುಂಬೈನಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ರಸ್ತೆಗಳು, ಹೆದ್ದಾರಿಗಳು ಜಲಾವೃತವಾಗಿದ್ದು ರೈಲುಗಳ ಸಂಚಾರವನ್ನು ಸ್ಥಗಿತ ಮಾಡಲಾಗಿದೆ. ಇನ್ನು ಶಾಲಾ ಕಾಲೇಜುಗಳಲ್ಲಿ ಬೆಳಗಿನ ತರಗತಿಗಳನ್ನು ರದ್ದು ಮಾಡಲಾಗಿದೆ. ಪರಿಸ್ಥಿತಿ ಅವಲೋಕಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ತಿಳಿಸಿದೆ.
ಮಧ್ಯರಾತ್ರಿ 1ರಿಂದ ಬೆಳಗ್ಗೆ 7 ಗಂಟೆಯವರೆಗೆ ಅಂದರೆ ಆರು ತಾಸಿನಲ್ಲಿ ದಾಖಲೆಯ 300 ಎಂಎಂ ಮಳೆ ಸುರಿದಿದೆ. ಮುಂದಿನ ಎರಡು ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಬಿಎಂಸಿ ತಿಳಿಸಿದೆ.
ರೈಲು ಹಳಿಗಳಲ್ಲಿ ನೀರು ನಿಂತು ಕೇಂದ್ರ ರೈಲ್ವೆಯ ಸಬ್ ಅರ್ಬನ್ ಸೇವೆಗಲ್ಲಿಳ ಸಂಚಾರ ವ್ಯತ್ಯಯವಾಗಿದೆ. ಎರಡೂ ಸಿಆರ್ ಕಾರಿಡಾರ್‌ಗಳಲ್ಲಿ ಸಬ್ ಅರ್ಬನ್ ಸೇವೆಗಳು ಬೆಳಿಗ್ಗೆ 6.45ಕ್ಕೆ ಪುನರಾರಂಭಗೊಂಡವು ಎಂದು ವಿಪತ್ತು ನಿರ್ವಹಣಾ ಇಲಾಖೆ ಮಾಹಿತಿ ನೀಡಿದೆ.
ಮುಂಬೈ ನಿವಾಸಿಗಳ ಪ್ರಮುಖ ಸಾರಿಗೆ ನೆಟ್‌ವರ್ಕ್ ಸಬ್ ಅರ್ಬನ್ ಸಂಚಾರ ವ್ಯತ್ಯಯಗೊಂಡ ಹಿನ್ನೆಲೆಯಲ್ಲಿ ಜನರು ತೀವ್ರ ತೊಂದರೆ ಅನುಭವಿಸಿದರು. ಕೇಂದ್ರ ರೈಲ್ವೇ ಮತ್ತು ಪಶ್ಚಿಮ ರೈಲ್ವೇ ನೆಟ್‌ವರ್ಕ್ ಪ್ರದೇಶ ಸೇರಿದಂತೆ ಥಾಣೆ, ಪಾಲ್ಘರ್ ಮತ್ತು ರಾಯಗಡ ರೈಲು ನಿಲ್ದಾಣಗಳಲ್ಲಿ ಭಾರೀ ಜನಸಮೂಹ ರೈಲು ಸೇವೆಗೆ ಕಾದು ನಿಲ್ಲುವಂತ ಪರಿಸ್ಥಿತಿ ಎದುರಾಗಿತು.
Poll (Public Option)

Post a comment
Log in to write reviews