2024-09-19 04:52:18

News broadcasting is the medium of broadcasting various news events and other information via television, radio, or the internet in the field of broadcast journalism.

Get In Touch

  • info@samayanews.tv
  • 8050000444
  • Samaya News, 48, 2nd Floor, 2nd Main, 2nd Cross, Ganganagar, Muthappa Block, RT Nagar, Bengaluru, Karnataka 560032

ಸಂಸದ ರಾಹುಲ್ ಗಾಂಧಿ ಹುಟ್ಟುಹಬ್ಬದ ಪ್ರಯುಕ್ತ ವೈಟ್ ಟಿ ಶರ್ಟ್ ಅಭಿಯಾನ, ನೀವು ಕೂಡ ವಿಡಿಯೋ ಕಳಿಸಬಹುದು!


ನವದೆಹಲಿ: ಕಾಂಗ್ರೆಸ್ ನಾಯಕ, ಸಂಸದರಾದ ರಾಹುಲ್ ಗಾಂಧಿ ತಮ್ಮ 54ನೇ ಹುಟ್ಟುಹಬ್ಬವನ್ನು ಬಹು ಸರಳತೆಯಿಂದ ಆಚರಿಸಿಕೊಂಡಿದ್ದಾರೆ. ಈ ಬಾರಿಯ ಹುಟ್ಟು ಹಬ್ಬದ ಪ್ರಯುಕ್ತ "ವೈಟ್‌ ಟಿ ಶರ್ಟ್‌ ಧಾರಣೆ " ಎಂಬ ನೂತನ ಅಭಿಯಾನವನ್ನೂ ಆರಂಭಿಸಿದ್ದಾರೆ.
ಅರೇ ಇದೇನಿದು ವೈಟ್‌ ಟಿ ಶರ್ಟ್‌ ಅಭಿಯಾನ, ಅಂತ ಯೋಚಿಸುವವರಿಗೆ ಸೂಕ್ತ ಉತ್ತರವನ್ನು ಕೊಟ್ಟಿದ್ದಾರೆ. 
ಸದಾ ಬಿಳಿ ಬಣ್ಣದ ಟಿ ಶರ್ಟ್ ಒಂದನ್ನೇ ಹೆಚ್ಚಾಗಿ ಧರಿಸುತ್ತಿದ್ದ ರಾಹುಲ್‌ ಅವರ ಬಳಿ, ʻಯಾಕೆ ನೀವು ಸದಾ ಬಿಳಿ ಬಣ್ಣದ ಉಡುಪನ್ನೇ ಧರಿಸುತ್ತೀರಿʼ ಎಂದು ಹಲವುರು ಪ್ರಶ್ನಿಸಿದ್ದರಂತೆ. ಆದಕ್ಕೆ ಉತ್ತರವಾಗಿ ಬಿಳಿ ಪಾರದರ್ಶಕತೆ, ಸ್ಥಿರತೆ ಮತ್ತು ಸರಳತೆಯನ್ನು ಪ್ರತಿನಿಧಿಸುತ್ತದೆ. `ನೀವು ಕೂಡ ಬಿಳಿ ಬಣ್ಣದ ಟಿ ಶರ್ಟ್‌ ನ ಧರಿಸಿ, ಆ ವಿಡಿಯೋವನ್ನು ನನಗೆ ಕಳುಹಿಸಿ ನಾನು ನಿಮಗೆ ವೈಟ್‌ ಟಿ ಶರ್ಟ್‌ ಕಳುಹಿಸುತ್ತೇನೆʼ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Post a comment

No Reviews