ವಾಹನ ಸವಾರರೇ ಗಮನಿಸಿ: HSRP ಇಲ್ಲದಿದ್ದರೆ 5 ದಿನಗಳ ನಂತರ 500 ರೂ. ದಂಡ..!
ಬೆಂಗಳೂರು: ರಾಜ್ಯದಲ್ಲಿ ಎಲ್ಲ ಮೋಟಾರು ವಾಹನಗಳಿಗೂ ಹೈ ಸೆಕ್ಯುರಿಟಿ ನೋಂದಣಿ ಪ್ಲೇಟ್ ಮಾಡಿಸಿಕೊಳ್ಳಲು ಇನ್ನು 5 ದಿನಗಳು ಮಾತ್ರ ಬಾಕಿಯಿವೆ. ಒಂದು ವೇಳೆ ಹೆಚ್‌ಎಸ್‌ಆರ್‌ಪಿ ನಂಬರ್ ಮಾಡಿಸದಿದ್ದರೆ ಅಂಥವರಿಗೆ ಸೆಪ್ಟಂಬರ್.16ರಿಂದ 500 ರೂ. ದಂಡ ವಿಧಿಸಲಾಗುತ್ತದೆ.
ಕೇಂದ್ರ ಸಾರಿಗೆ ಇಲಾಖೆಯಿಂದ ದೇಶದಾದ್ಯಂತ ಎಲ್ಲ ಮೋಟಾರು ವಾಹನಗಳಿಗೆ ಒಂದೇ ಮಾದರಿಯ ನಂಬರ್ ಪ್ಲೇಟ್ ಅಳವಡಿಕೆ ಮಾಡುವ ಸಂಬಂಧ ಹೈ ಸೆಕ್ಯುರಿಟಿ ನೋಂದಣಿ ಪ್ಲೇಟ್ ಅಳವಡಿಕೆ ಮಾಡಲು ಆದೇಶ ಹೊರಡಿಸಿದೆ. ಆಯಾ ರಾಜ್ಯದ ಸಾರಿಗೆ ಇಲಾಖೆಗಳಿಗೆ ಹೆಚ್ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಗಡುವು ನೀಡಿ ನಂತರ ದಂಡ ಪಾವತಸಿಕೊಳ್ಳಲು ಅನುಮತಿಯನ್ನೂ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಈಗಾಗಲೇ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡುವುದಕ್ಕೆ ನಾಲ್ಕು ಬಾರಿ ಗಡುವು ವಿಸ್ತರಣೆ ಮಾಡಿಕೊಂಡು ಬಂದಿದೆ. ಇದೀಗ ನಾಲ್ಕನೇ ಬಾರಿಯ ಗಡುವು ವಿಸ್ತರಣೆ ಅವಧಿಯು ಸೆಪ್ಟಬರ್.15ಕ್ಕೆ ಮುಕ್ತಾಯಗೊಳ್ಳಲಿದೆ
ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಬುಕಿಂಗ್ ಮಾಡುವವರಿಗೆ ಹೊಸ ಸಂಕಷ್ಟ
ಇನ್ನೂ ಟೈಮ್ ಇದೆ ಅಂತಿದ್ದವರಿಗೆ, ಬರೀ 5 ದಿನ ಟೈಮ್ ಬಾಕಿ ಉಳಿದುಕೊಂಡಿದೆ. ಸೆಪ್ಟೆಂಬರ್ 16 ರಿಂದ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಂಡು ಸಂಚಾರ ಮಾಡುವುದು ಕಡ್ಡಾಯವಾಗಲಿದೆ. ಸೆ.15ಕ್ಕೆ ಡೆಡ್ ಲೈನ್ ಕೊಟ್ಟಿರುವ ಸಾರಿಗೆ ಇಲಾಖೆ, ಮತ್ತೆ ಡೆಡ್ ಲೈನ್ ವಿಸ್ತರಣೆ ಮಾಡಲ್ಲವೆಂದು ಶಪಥ ಮಾಡಿದಂತಿದೆ. ಈ ಹಿನ್ನೆಲೆಯಲ್ಲಿ ಕೇವಲ 5 ದಿನಗಳು ಬಾಕಿ ಇದ್ದರೂ ಯಾವುದೇ ಸಾರಿಗೆ ಇಲಾಕೆ ಅಧಿಕಾರಿಗಳಾಲೀ ಅಥವಾ ಸಾರಿಗೆ ಇಲಾಖೆ ಮಂತ್ರಿ ರಾಮಲಿಂಗಾರೆಡ್ಡಿ ಅವರಾಗಲೀ ಈ ಬಗ್ಗೆ ಯಾವುದೇ ಚಕಾರವನ್ನೆತ್ತಿಲ್ಲ.
ಇನ್ನು ರಾಜ್ಯ ಸರ್ಕಾರವು HSRP ನಂಬರ್ ಪ್ಲೇಟ್ ಅಳವಡಿಕೆಗೆ ಗಡುವು ನೀಡಿದ್ದಲ್ಲದೇ ನ್ಯಾಯಾಲಯವೂ ಕೂಡ ವಾಹನ ಸವಾರರಿಗೆ ಕೆಲವು ದಿನಗಳ ಕಾಲ ಗಡುವು ನೀಡುವಂತೆ ಸರ್ಕಾರಕ್ಕೆ ಸೂಚನೆ ನೀಡಿತ್ತು. ಹೀಗಾಗಿ, ನಾಲ್ಕು ಬಾರಿ ಗಡುವು ನೀಡಿದ ನಂತರವೂ ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳದವರ ವಿರುದ್ಧ ದಂಡವನ್ನು ವಿಧಿಸಲು ತೀರ್ಮಾನಿಸಲಾಗಿದೆ. ಸೆ.16ರಿಂದ ನಿಮ್ಮ ವಾಹನಗಳಿಗೆ HSRP ನಂಬರ್ ಪ್ಲೇಟ್ ಇಲ್ಲವೆಂದರೆ 500 ರೂ. ದಂಡ ವಿಧಿಸಲಾಗುತ್ತದೆ. ಇದಕ್ಕೆ ಆರ್ ಟಿ ಓ ಮಾತ್ರವಲ್ಲ, ಟ್ರಾಫಿಕ್ ಪೊಲೀಸರಿಂದಲೂ ದಂಡ ವಿಧಿಸಲಾಗುತ್ತದೆ.
ಹೆಚ್ ಎಸ್ ಆರ್ ಪಿ ಗಡುವು ಮುಗಿಯಲು ಇನ್ನು ಕೇವಲ 12 ದಿನಗಳು ಬಾಕಿ
ರಾಜ್ಯದಲ್ಲಿ ಒಟ್ಟಾರೆಯಾಗಿ ರಾಜ್ಯದಲ್ಲಿವೆ 2 ಕೋಟಿಗೂ ಅಧಿಕ ಮೋಟಾರು ವಾಹನಗಳಿವೆ. ಆದರೆ, ಇಲ್ಲಿವರೆಗೆ ಕೇವಲ 51 ಲಕ್ಷ ವಾಹನಗಳು ಮಾತ್ರ HSRP ನಂಬರ್ ನೊಂದಣಿಯಾಗಿವೆ. ಉಳಿದ 1.49 ಕೋಟಿ ವಾಹನಗಳು ಇನ್ನೂ HSRP ನಂಬರ್ ಪ್ಲೇಟ್ ಹಾಕಿಸಿಕೊಂಡಿಲ್ಲ. ಹೀಗಾಗಿ, ಸೆಪ್ಟೆಂಬರ್ 16 ರಿಂದಲೇ ಸಾರಿಗೆ ಇಲಾಖೆಯಿಂದ ಎಲ್ಲ ಜಿಲ್ಲೆಗಳಲ್ಲೂ ಸ್ಪೆಷಲ್ ಡ್ರೈವ್ ಮಾಡಲು ಚಿಂತನೆ ಮಾಡಿದೆ. ಮೊದಲ ಸಲಕ್ಕೆ 500 ರೂ ದಂಡ, ಎರಡನೇ ಸಲಕ್ಕೆ 1000 ದಂಡ ಎಂದು ಸಾರಿಗೆ ಇಲಾಖೆ ಸ್ಪಷ್ಟನೆಯನ್ನು ನೀಡಿದೆ.
Post a comment
Log in to write reviews