
ತುಮಕೂರು: ರಸ್ತೆ ದಾಟುವಾಗ ಬಸ್ ಡಿಕ್ಕಿ ಹೊಡೆದ ಪರಿಣಾಮ ತಾಯಿ ಮತ್ತು ಮಗು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು ಒಬ್ಬರು ಗಂಭೀರವಾಗಿ ಗಾಯ ಗೂಂಡಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ರಾಮಶೆಟ್ಟಿಹಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ತಾಯಿ ಕಮಲ(35) ಹಾಗು ವೀಣಾ (16) ವೃತ ದುವೈವಿ ಎಂದು ತಿಳಿದು ಬಂದಿದೆ. ಅಮ್ಮ ಮಗಳು ರಸ್ತೆ ದಾಟುವಾಗ ಗೀತಾಂಜನೇಯ ಗಾರ್ಮೆಂಟ್ಸ್ ಗೆ ಸೇರಿದ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪಿದ್ದಾರೆ ಹಾಗು ಪಾದಚಾರಿ ಮುದ್ದಪ್ಪ ತಲೆಗೆ ತ್ರೀವ ಗಾಯಗಾಳಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ತುಮಕುರೊ ಜಿಲ್ಲಾ ಆಸ್ಪತ್ರೆ ಕರೆದೊಯ್ಯಲಾಗಿದೆ.
ಇಲ್ಲಿಯವರೆಗು ಇದೇ ಜಾಗದಲ್ಲಿ ಐವರು ಪ್ರಾಣ ಕಳೆದು ಕೊಂಡಿದ್ದಾರೆ. ಆದರು ಇಲ್ಲಿ ಅಧಿಕಾರಿಗಳು ಇದರ ಬಗ್ಗೆ ಯಾವುದೇ ತಲೆಕೆಡಿಸಿಕೊಡಿಲ್ಲ. ಹಾಗು ಸಮಯ ಕಳೆದರು ಶವವನ್ನು ಎತ್ತದ ಕಾರಣ ಪೊಲೀಸರು ಹಾಗು ಗ್ರಾಮಸ್ಥರ ನಡುವೆ ತ್ರೀವ್ರ ವಾಗ್ವಾದಾಳಿ ನಡೆದಿದೆ.
Poll (Public Option)

Post a comment
Log in to write reviews