
ಇಸ್ರೇಲ್ : ಗಾಜಾದಲ್ಲಿ ಅಕ್ಟೋಬರ್ 7 ರಂದು ಯುದ್ಧ ಪ್ರಾರಂಭವಾದಾಗಿನಿಂದ ಇರಾನ್ ಬೆಂಬಲಿತ ಉಗ್ರಗಾಮಿ ಗುಂಪು ಹಿಜ್ಬುಲ್ಲಾ ವಿರುದ್ಧ ಇಸ್ರೇಲ್ ವೈಮಾನಿಕ ದಾಳಿ ನಡೆಸುತ್ತಲೇ ಇದೆ. ದಕ್ಷಿಣ ಲೆಬನಾನ್ ಮೇಲೆ ಸೋಮವಾರ ನಡೆದ ವೈಮಾನಿಕ ದಾಳಿಯಲ್ಲಿ 400ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಎಂದು ತಿಳಿದು ಬಂದಿದೆ.
ಸುಮಾರು 1,650 ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ. ಮೃತರಲ್ಲಿ 100 ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ.
ಲೆಬನಾನ್‌ನೊಂದಿಗೆ ಇಸ್ರೇಲ್‌ನ ಉತ್ತರದ ಗಡಿಯಲ್ಲಿ ಸಣ್ಣ ಘರ್ಷಣೆಗಳು ಮತ್ತು ಚಕಮಕಿಗಳು ಸಾಮಾನ್ಯವಾಗಿವೆ. ಇಲ್ಲಿಯವರೆಗಿನ ಅತಿದೊಡ್ಡ ದಾಳಿ ಇದಾಗಿದೆ ಏಂದುಇಸ್ರೇಲ್ ವraದಿ ಮಾಡಿದೆ.
Poll (Public Option)

Post a comment
Log in to write reviews