
ಗಾಜಾ: ಫಜ್ರ್ (ಡಾನ್) ಪ್ರಾರ್ಥನೆಯನ್ನು ನಿರ್ವಹಿಸುವಾಗ ಸ್ಥಳಾಂತರಗೊಂಡ ಜನರನ್ನು ಗುರಿಯಾಗಿಸಿಕೊಂಡು ಶನಿವಾರ ಅಧಿಕೃತ ಪ್ಯಾಲೇಸ್ಟಿನಿಯನ್ ಸುದ್ದಿ ಸಂಸ್ಥೆ WAFA ಅನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದ್ದು, ಇಸ್ರೇಲ್ ನಡೆಸಿದ ದಾಳಿಯಲ್ಲಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಡಜನ್‌ಗಟ್ಟಲೆ ಜನರು ಗಾಯಗೊಂಡಿದ್ದಾರೆ. ಹಮಾಸ್ ನಡೆಸುತ್ತಿರುವ ಗಾಜಾ ಸರ್ಕಾರಿ ಮಾಧ್ಯಮ ಕಚೇರಿಯ ಪ್ರಕಾರ ಜನರು ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಈ ದಾಳಿ ನಡೆಸಲಾಗಿದೆ ಎಂದು ಬೆಳಕಿಗೆ ಬಂದಿದೆ.
ಆಗಸ್ಟ್ 4 ರಂದು, ಗಾಜಾ ನಗರದಲ್ಲಿ ಸ್ಥಳಾಂತರಗೊಂಡ ಜನರಿಗೆ ಆಶ್ರಯವಾಗಿ ಕಾರ್ಯನಿರ್ವಹಿಸುತ್ತಿದ್ದ ಎರಡು ಶಾಲೆಗಳ ಮೇಲೆ ಇಸ್ರೇಲ್ ಸೈನಿಕರು ದಾಳಿ ಮಾಡಿದ್ದರು. ಈ ವೇಳೆ 30 ಮಂದಿ ಸಾವನ್ನಪ್ಪಿದ್ದರು ಮತ್ತು ಹಲವಾರು ಮಂದಿ ಗಾಯಗೊಂಡಿದ್ದರು. ನಗರದ ಹಮಾಮಾ ಶಾಲೆಯ ಮೇಲೆ ಇಸ್ರೇಲ್ ಸೇನೆ 17 ಜನರನ್ನು ಕೊಂದಿತ್ತು.
ಆಗಸ್ಟ್ 1 ರಂದು, ದಲಾಲ್ ಅಲ್-ಮುಘ್ರಾಬಿ ಶಾಲೆಯ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 15 ಜನರು ಸಾವನ್ನಪ್ಪಿದ್ದರು. ಕಳೆದ ವರ್ಷ ಅಕ್ಟೋಬರ್ 7 ರಂದು ಹಮಾಸ್ ಇಸ್ರೇಲ್ ಮೇಲೆ ಮಾರಣಾಂತಿಕ ದಾಳಿಯನ್ನು ಪ್ರಾರಂಭಿಸಿ ಸುಮಾರು 1,200 ಜನರನ್ನು ಕೊಂದು 250 ಜನರನ್ನು ಒತ್ತೆಯಾಳುಗಳಾಗಿರಿಸಿತ್ತು. ಇದರ ನಂತರ 10 ತಿಂಗಳ ಕಾಲ ನಡೆದ ಯುದ್ಧದಲ್ಲಿ ಗಾಜಾದಲ್ಲಿ 40,000 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯಾದವರು ಇಸ್ರೇಲ್ ದಾಳಿಗೆ ಸಾವನ್ನಪ್ಪಿದ್ದಾರೆ.
Poll (Public Option)

Post a comment
Log in to write reviews