
ಗಂಗಾ ಸ್ನಾನ, ತುಂಗಾ ಪಾನ ಎಂಬ ಮಾತು ಹಳೆಯದಾಯ್ತು, ಪಾನಕ್ಕಲ್ಲ, ಸ್ನಾನಕ್ಕೂ ಯೋಗ್ಯವಿಲ್ಲದಷ್ಟು ತುಂಗೆ ಕಲುಷಿತಗೊಂಡಿದ್ದಾಳೆ.
ಭಕ್ತಿಭಾವದಿಂದ ಗಂಗೆಯಲ್ಲಿ ಮುಳುಗಿದರೆ ಅಥವಾ ತುಂಗೆಯನ್ನು ಗುಟುಕರಿದರೆ ಚರ್ಮ ಖಾಯಿಲೆ ಜೋತೆಗೆ ಸಾಂಕ್ರಾಮಿಕ ರೋಗಗಳಿಗೂ ಬಲಿಯಾಗಬೇಕಾದಿತು. ಗಂಗೆಯಲ್ಲಿ ಹಲವು ಕಲುಷಿತ ಅಂಶಗಳಿರುವುದು ಈಗಾಗಲೇ ಸಾಬೀತಾಗಿದ್ದು ಗಂಗಾ ಶುದ್ಧೀಕರಣಕ್ಕಾಗಿ ಕಳೆದ ಒಂದು ದಶಕದಿಂದ ಸಾವಿರಾರು ಕೋಟಿ ರೂಪಾಯಿ ಸುರಿಯಲಾಗುತ್ತಿದೆ.
ಇತ್ತೀಚಿನವರೆಗೆ ಆತಂಕವಿಲ್ಲದೆ ಕುಡಿಯಬಹುದಾಗಿದ್ದ ತುಂಗೆಯ ನೀರು ಕೂಡ ಈಗ ಪಾನಕ್ಕೆ ಯೋಗ್ಯವಲ್ಲ ಎಂದು ಹಲವು ವರದಿಗಳು ಬೆಳಕಿಗೆ ಬಂದಿದೆ. ಅದೂ ಕೂಡ ಅಪಾಯಕಾರಿ ಅಲ್ಯುಮಿನಿಯಂ ಅಂಶ ಎಂಟು ಪಟ್ಟು ಹೆಚ್ಚಿರುವುದರಿಂದ ತುಂಗೆಯ ನೀರು ಸುರಕ್ಷಿತವಲ್ಲ ಎನ್ನುವ ಸಂಗತಿ ಕರ್ನಾಟಕ ಜನತೆಯ ಆತಂಕಕ್ಕೆ ಕಾರಣವಾಗಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಪಿಸಿಬಿ), ಶಿವಮೊಗ್ಗದ ನಿರ್ಮಲ ತುಂಗಾ ಅಭಿಯಾನ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕೆಲವು ಖಾಸಗಿ ಸಂಶೋಧಕರು ನಡೆಸಿದ ವಿವಿಧ ಅಧ್ಯಯನಗಳಲ್ಲಿ ತುಂಗಾ ನದಿಯ ನೀರಿನಲ್ಲಿ ಅಪಾಯಕಾರಿ ಮಟ್ಟದಲ್ಲಿ ಅಲ್ಯುಮಿನಿಯಂ ಮತ್ತು ಇತರ ಲೋಹ ಮತ್ತು ರಾಸಾಯನಿಕಗಳು ಪತ್ತೆಯಾಗಿದ್ದು, ಕುಡಿಯಲು ಮಾತ್ರವಲ್ಲ, ಸ್ನಾನಕ್ಕೂ ಯೋಗ್ಯವಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.
Poll (Public Option)

Post a comment
Log in to write reviews