
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಬಿಡುಗಡೆ ಜೊತೆಗೆ ಹಾಸನ ಜಿಲ್ಲೆ ಸಕಲೇಶಪುರದಲ್ಲಿ ಅಪರೂಪದ ಘಟನೆಯೊಂದು ನಡೆದಿದೆ.
ಸಕಲೇಶಪುರ ತಾಲೂಕಿನ ಚಿನ್ನಳ್ಳಿ ಗ್ರಾಮದಲ್ಲಿ ಮಗನ ಜೊತೆ ತಾಯಿಯೂ ಕೂಡ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಬರೆದು ತಾಯಿಯು ಉತ್ತೀರ್ಣರಾಗಿದ್ದಾಳೆ.
38 ವರ್ಷದ ಜ್ಯೋತಿ ಪಿ ಆರ್ ಎರಡನೇ ಬಾರಿ ಪರೀಕ್ಷೆ ಬರೆದು ೨೫೦ ಅಂಕ ಗಳಿಸುವ ಮೂಲಕ ಉತ್ತಿರ್ಣರಾಗಿದ್ದಾರೆ. ಜೊತೆಗೆ ಮಗ ಸಕಲೇಶಪುರ ತಾಲೂಕಿನ ಬಾಳ್ಳುಪೇಟೆಯ ಸಿದ್ದಣ್ಣಯ್ಯ ಹೈಸ್ಕೂಲ್ ನಲ್ಲಿ ಓದುತ್ತಿದ್ದು, ೫೮೨ ಗರಿಷ್ಠ ಅಂಕ ಪಡೆದು ಉತ್ತೀರ್ಣರಾಗಿದ್ದಾರೆ. ಇವರಿಬ್ಬರ ಫಲಿತಾಂಶದಿಂದ ಕುಟುಂಬದಲ್ಲಿ ಸಂತೋಷದ ವಾತಾವರಣ ಮೂಡಿದೆ.
Poll (Public Option)

Post a comment
Log in to write reviews