
ಸ್ಯಾಂಡಲ್‌ವುಡ್ ನ ಡೈರೆಕ್ಟರ್ ಜೋಗಿ ಪ್ರೇಮ್ ತಮ್ಮ ಕೆಡಿ ಸಿನಿಮಾದ ಹೊಸ ಸುದ್ದಿಕೊಟ್ಟಿದ್ದಾರೆ. ಸದ್ದಿಲ್ಲದೆ ಕೆಡಿ ಮೂವಿ ಎರಡೂ ಸರಣಿಯನ್ನ ಚಿತ್ರೀಕರಿಸಿರೋ ಜೋಗಿ ಪ್ರೇಮ್,ಇದೀಗ ಕೆಲವು ಫೋಟೋಸ್ ಹಾಗೂ ಒಂದು ವಿಡಿಯೋ ಹಂಚಿಕೊಂಡಿದ್ದಾರೆ.
ಆದರೆ ಇವು ಶೂಟಿಂಗ್ ಸೆಟ್‌ನಲ್ಲಿ ತೆಗೆದಿರೋ ವಿಡಿಯೋ ಮತ್ತು ಪೋಟೋಸ್ ಆಗಿದ್ದು,ಇವುಗಳ ಜೊತೆಗೆ ಜೋಗಿ ಪ್ರೇಮ್ ಇನ್ನೂ ಒಂದು ವಿಚಾರವನ್ನ ಹೇಳಿಕೊಂಡಿದ್ದಾರೆ. ಆ ವಿಚಾರ ವಿಶೇಷವಾಗಿಯೇ ಇದೆ.
ಕೆಡಿ ಸಿನಿಮಾ ಹಾಡಿನ ಚಿತ್ರೀಕರಣಕ್ಕೆ ಮೋಹನ್ ಮಾಸ್ಟರ್ ಬಂದಿದ್ದಾರೆ. ಆದಷ್ಟು ಬೇಗ ಸಿನಿಮಾದ ಎಲ್ಲ ಹಾಡುಗಳು ಬರಲಿದೆ ಅಂತ ಜೋಗಿ ಪ್ರೇಮ್ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
Poll (Public Option)

Post a comment
Log in to write reviews