ಟಾಪ್ 10 ನ್ಯೂಸ್
ಮೊದಲ ಕಡತಕ್ಕೆ ಸಹಿ ಮಾಡಿದ ಮೋದಿ : ಕಿಸಾನ್ ಸಮ್ಮಾನ್ ಯೋಜನೆಯ 20 ಸಾವಿರ ಕೋಟಿ ರೂ. ಬಿಡುಗಡೆ

ನವದೆಹಲಿ: ಪ್ರಧಾನ ಮಂತ್ರಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಕಿಸಾನ್ ಸಮ್ಮಾನ್ ನಿಧಿ ಕಡತಕ್ಕೆ ಮೋದಿ ಸಹಿ ಹಾಕಿದ್ದಾರೆ. ಒಟ್ಟು 9.3 ಕೋಟಿ ರೈತರಿಗೆ ಹಣ ಸಿಗಲಿರುವು ಈ ಕಿಸಾನ್ ಸಮ್ಮಾನ್ ಯೋಜನೆಯ ಈ ವರ್ಷದ ಎರಡನೇ ಕಂತು ಇದಾಗಿದೆ. ಒಟ್ಟು 20,000 ಕೋಟಿ ರೂ. ಅನುದಾನ ಇದಾಗಿದ್ದು, 4 ತಿಂಗಳಿಗೊಮ್ಮೆ 2 ಸಾವಿರ ರೂಪಾಯಿಯಂತೆ ವರ್ಷಕ್ಕೆ 6 ಸಾವಿರ ರೂಪಾಯಿ ದೇಶದ ರೈತರ ಖಾತೆಗೆ ನೇರವಾಗಿ ಹಣ ಸಂದಾಯವಾಗುತ್ತದೆ. ಮೋದಿ ಮೂರನೇ ಬಾರಿಗೆ ಪ್ರಧಾನಿ ಹುದ್ದೆ ಅಲಂಕರಿಸಿದ ನಂತರ ಮೊಟ್ಟ ಮೊದಲ ಸಹಿ ಮಾಡಿದ ಕಡತವೇ ಈ ಕಿಸಾನ್ ಸಮ್ಮಾನ್ ಯೋಜನೆಯ ಕಡತವಾಗಿದೆ.
Poll (Public Option)

Post a comment
Log in to write reviews