
ನವದೆಹಲಿ : ಇಂದು ವಿಶ್ವವಿಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ 95 ನೇ ಜನ್ಮದಿವಾಗಿದೆ. ತಮ್ಮ ಸುಮಧರ ಕಂಠದಿಂದ ಲತಾ ಮಂಗೇಶ್ಕರ್ ಭಾರತವಷ್ಟೇ ಅಲ್ಲದ್ ವಿಶ್ವಾದ್ಯಂತ ಅಭಿಮಾನಿಗಳನ್ನು ಗಳಿಸಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ ತಮ್ಮ ಎಕ್ಸ್ ಖಾತೆಯ ಮೂಲಕ ಲತಾ ಮಂಗೇಶ್ಕರ್ ಜನುಮದಿನಕ್ಕೆ ಶುಭ ಕೋರಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಎಕ್ಸ್‌ನಲ್ಲಿ ಪೊಸ್ಟ್ ಮಾಡಿರುವ ಅವರು ಲತಾ ದೀದಿಯ ಜನುಮ ದಿನದ ಸ್ಮರಣೆಯಲ್ಲಿ. ಲತಾ ಮಂಗೇಶ್ಕರ್ ಅವರು ಸದಾ ಕಾಲ ತಮ್ಮ ಹಾಡುಗಳ ಮೂಲಕ ಜನರ ಹೃದಯದಲ್ಲಿ , ಮನಸಿನಲ್ಲಿ ಸ್ಥಾನ ಗಳಿಸಿದ್ದಾರೆ. ನನ್ನ ಹಾಗೂ ಲತಾ ದೀದಿಯ ನಡುವೆ ವಿಶೇಷ ಬಂಧವಿದೆ. ಅವರ ಆಶೀರ್ವಾದಗಳನ್ನು ಪಡೆದ ಅದೃಷ್ಟವಂತ ನಾನಾಗಿದ್ದೇನೆ ಎಂದು ಪ್ರಧಾನಿ ಮೋದಿ ಬರೆದುಕೊಂಡಿದ್ದಾರೆ. ವಿಶ್ವಾದ್ಯಂತ ಇಂದು ಲತಾ ಮಂಗೇಶ್ಕರ್ ಅವರ ಸ್ಮರಣೆಯಲ್ಲಿ ಅನೇಕ ಕಾರ್ಯಕ್ರಮಗಳು ನಡೆಯಲಿವೆ.
Poll (Public Option)

Post a comment
Log in to write reviews