
ತಿರುವನಂತಪುರಂ : ವಿಶೇಷ ಆಹ್ವಾನದ ಮೇರೆಗೆ ಇಟಲಿಯಲ್ಲಿ ನಡೆದ ಜಿ-7 ಶೃಂಗಸಭೆಯಲ್ಲಿ ಭಾಗಿಯಾದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇದೇ ವೇಳೆ ವ್ಯಾಟಿಕನ್ ಪೋಪ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ನರೇಂದ್ರ ಮೋದಿ ಮತ್ತು ಪೋಪ್ ಭೇಟಿಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಕುರಿತು ಕೇರಳ ಕಾಂಗ್ರೆಸ್ ಮಾಡಿದ ಟ್ವೀಟ್ ಇದೀಗ ವಿವಾದಕ್ಕೆ ಕಾರಣವಾಗಿದೆ.
ಭೇಟಿಯ ವೇಳೆ ಪ್ರಧಾನಿ ಮೋದಿ ಅವರು, ಪೋಪ್ ಅವರನ್ನು ಅಪ್ಪಿಕೊಂಡಿದ್ದರು. ಈ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಬಗ್ಗೆ ಟ್ವೀಟ್ ಮಾಡಿರುವ ಕೇರಳ ಕಾಂಗ್ರೆಸ್, ಇದು ಕ್ರಿಶ್ಚಿಯನ್ ಸಮುದಾಯಕ್ಕೆ ಮಾಡಿದ ಅವಮಾನ ಎಂದಿದೆ. “ಕೊನೆಗೂ, ದೇವರನ್ನು ಭೇಟಿಯಾಗಲು ವ್ಯಾಟಿಕನ್ ಪೋಪ್ಗೆ ಅವಕಾಶ ಸಿಕ್ಕಿತು” ಎನ್ನುವ ಶೀರ್ಷಿಕೆ ನೀಡಿ, ಪೋಪ್ ಅವರ ಭಾಷಣದ ವಿಡಿಯೋವನ್ನು ಎಕ್ಸ್‌ನಲ್ಲಿ ಶೇರ್ ಮಾಡಿದೆ. ಕೇರಳ ಕಾಂಗ್ರೆಸ್ ಹಂಚಿಕೊಂಡಿರುವ ವಿಡಿಯೋದಲ್ಲಿ ಪೋಪ್ ಅವರು, ’ಬುದ್ದಿವಂತರ ನಗು, ದೇವರನ್ನೂ ನಗುವಂತೆ ಮಾಡುತ್ತದೆ’ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಮಾಡಿರುವ ಈ ಟ್ವೀಟ್ ಅನ್ನು ಬಿಜೆಪಿ ಖಂಡಿಸಿದ್ದು, ಕೇರಳ ಕಾಂಗ್ರೆಸ್ ಘಟಕವನ್ನು ಇಸ್ಲಾಮಿಕ್ ಅಥವಾ ನಕ್ಸಲರ ತಂಡ ನಿರ್ವಹಿಸುತ್ತಿರಬಹುದು. ಈ ರೀತಿಯಾಗಿ ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ಪಕ್ಷವು ಪೋಪ್ ಮತ್ತು ಕ್ರಿಶ್ಚಿಯನ್ ಸಮುದಾಯವನ್ನೂ ಅವಹೇಳನ ಮಾಡುತ್ತಿದೆ ಕೆ.ಸಿ.ವೇಣುಗೋಪಾಲ್ ಅವರ ಗಮನಕ್ಕೆ ಬಂದೇ ಕೇರಳ ಕಾಂಗ್ರೆಸ್ ಈ ಟ್ವೀಟ್ ಮಾಡಿದೆ. ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿಯವರ ಪ್ರತಿಕ್ರಿಯೆ ಈ ವಿಚಾರದಲ್ಲಿ ಏನು ಎನ್ನುವುದು ಮುಖ್ಯ ಎಂದು ಎಂದು ಬಿಜೆಪಿ ನಾಯಕ ಸುರೇಂದ್ರನ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಜೀಸಸ್ ಒಂದೇ ಎಂದು ಕೇರಳ ಕಾಂಗ್ರೆಸ್ ಟ್ವೀಟ್ ಮಾಡಿದೆ. ಇದು ನಿಜಕ್ಕೂ ಖಂಡನಾರ್ಹ. ಈ ಮೂಲಕ ಕಾಂಗ್ರೆಸ್ ಕ್ರಿಶ್ಚಿಯನ್ ಸಮುದಾಯವನ್ನು ಅವಮಾನ ಮಾಡಿದೆ. ಈ ಮಟ್ಟಕ್ಕೆ ಕಾಂಗ್ರೆಸ್ ಇಳಿದಿರುವುದು ನಾಚಿಕೆಗೇಡಿನ ಸಂಗತಿ ಎಂದು ಕೇಂದ್ರ ಸಚಿವ ಜಾರ್ಜ್ ಕುರಿಯನ್ ಹೇಳಿದ್ದಾರೆ.
ಜಿ7 ಶೃಂಗಸಭೆಯ ವೇಳೆ ಭಾರತಕ್ಕೆ ಭೇಟಿ ನೀಡುವಂತೆ ರೋಮನ್ ಕ್ಯಾಥೊಲಿಕ್ ಸಮುದಾಯದ ಪರಮೋಚ್ಛ ಗುರು ಪೋಪ್ ಫ್ರಾನ್ಸಿಸ್ ಅವರನ್ನು ಪ್ರಧಾನಿ ಮೋದಿ ಆಹ್ವಾನಿಸಿದ್ದಾರೆ.
Poll (Public Option)

Post a comment
Log in to write reviews