
ಕೊಲ್ಕತ್ತಾ: ಮೋದಿ ಸರ್ಕಾರ ಹದಿನೈದು ದಿನಗಳಲ್ಲಿ ಪತನವಾಗಲಿದೆ ಎಂದು ಪಶ್ಚಿಮ ಬಂಗಾಳ ಮಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಟಿಎಂಸಿ ಸಂಸದರ ಸಭೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ದೇಶ ಬದಲಾವಣೆ ಬಯಸುತ್ತಿದೆ. ಇನ್ನೂ ಎರಡುವಾರ ಕಾದು ನೋಡಿ ಎಂದರು.
ಇಂಡಿಯಾ ಬಣ ಈ ಬಾರಿ ಸರ್ಕಾರ ರಚಿಸುವ ಹಕ್ಕನ್ನು ಹೊಂದಿಲ್ಲ. ಆದರೆ ಅಧಿಕಾರ ಪಡೆಯಲು ಪ್ರಯತ್ನಿಸುತ್ತಿಲ್ಲ ಎಂದು ಅರ್ಥವಲ್ಲ. ಈ ಜನಾದೇಶ ಬದಲಾವಣೆಗಾಗಿ ನಾವು ಕಾಯುತ್ತಿದ್ದೇವೆ. ಈಗಿನ ಪರಿಸ್ಥಿತಿಯ ಮೇಲೆ ನಿಗಾ ಇಡಲಾಗಿದೆ. ಈ ಜನಾದೇಶ ನರೇಂದ್ರ ಮೋದಿ ವಿರುದ್ಧವಾಗಿದ್ದು ಮೋದಿ ಪ್ರಧಾನಿಯಾಗಿ ಹೆಚ್ಚು ಸಮಯ ಮುಂದುವರೆಯುವುದಿಲ್ಲ. ಆದರೂ ಅವರಿಗೆ ಅಧಿಕಾರ ವಹಿಸಿಕೊಳ್ಳಲು ಅವಕಾಶ ನೀಡಲಾಗಿದೆ ಎಂದರು.
Poll (Public Option)

Post a comment
Log in to write reviews