
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಲಿದ್ದು, ಚುನಾವಣಾ ಫಲಿತಾಂಶದ ಬಳಿಕ ಬಿಜೆಪಿ ಇಬ್ಭಾಗ ಆಗಲಿದೆ ಮೋದಿ ಪ್ರಧಾನಿಯಾಗಿ ಮುಂದುವರೆಯುವುದು ಅಸಾಧ್ಯ ಎಂದು ಶಿವಸೇನೆ ಮುಖ್ಯಸ್ಥ ಉದ್ದವ್ ಠಾಕ್ರೆ ಹೇಳಿದ್ದಾರೆ. ನಾಸಿಕ್ನಲ್ಲಿ ರಾಜಾಭಾವು ವಾಜೆ ಪರ ಪ್ರಚಾರ ಮಾಡಿದ ಠಾಕ್ರೆ ಮೋದಿ ಬಗ್ಗೆ ವಾಗ್ದಾಳಿ ನಡೆಸಿ, ನಮ್ಮ ಪಕ್ಷವು ಕಾಂಗ್ರೆಸ್‌ನೊಂದಿಗೆ ವಿಲೀನವಾಗಲಿದೆ ನೀವು ಹೇಳುತ್ತಿದ್ದೀರಿ, ಆದರೆ 30 ವರ್ಷಗಳಿಂದ ನಾವು ಬಿಜೆಪಿಯೊಂದಿಗೆ ಇದ್ದರೂ ವಿಲೀನವಾಗಲಿಲ್ಲ, ಜೂನ್ 5ರಬಳಿಕ ನೀವು ಮಾಜಿ ಪ್ರಧಾನಿಯಾಗುತ್ತೀರಿ ಇದು ಜನರ ನಿರ್ಧಾರ ಎಂದಿದ್ದಾರೆ.
ಗುಜರಾತ್‌ನಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಮತ್ತು ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ರೈತರ ನಡುವೆ ತಾರತಮ್ಯ ಮಾಡುವ ಮೂಲಕ 40 ಕ್ಕೂ ಹೆಚ್ಚು ಸಂಸದರನ್ನು ಆಯ್ಕೆ ಮಾಡಿದ ಬಿಜೆಪಿ ಮತ್ತು ಪ್ರಧಾನಿ ಮೋದಿ ಮಹಾರಾಷ್ಟ್ರದ ಜನರ ಬೆನ್ನಿಗೆ ಚೂರಿ ಹಾಕಿದ್ದಾರೆ.
ನೀವು ಇನ್ನು ಮುಂದೆ ಪ್ರಧಾನಿಯಾಗಿ ಇರಲಾರಿರಿ. ಪಕ್ಷದ ಚಟುವಟಿಕೆಗಳನ್ನು ಮುನ್ನಡೆಸಲು ನಿಮ್ಮ ಪಕ್ಷಕ್ಕೆ ಯಾವ ಮುಖವೂ ಇರುವುದಿಲ್ಲ ಎಂದು ವ್ಯಂಗ್ಯವಾಗಿ ಮಾತನಾಡಿದ್ದಾರೆ.
Poll (Public Option)

Post a comment
Log in to write reviews